Header Ads
Header Ads
Header Ads
Breaking News

ಬೀದಿನಾಯಿ ಓಡಿಸೋಕೆ ಇಲ್ಲಿದೆ ಪರಿಹಾರ ನೀಲಿ ನೀರಿನ ಗೋಡೆ ಕಟ್ಟಿದ್ರೆ ಸಾಕು ನಾಯಿ ಬರಲ್ಲ ಉಡುಪಿ ಪರ್ಕಳದ ನಿವಾಸಿಯಿಂದ ಹೊಸ ಪ್ರಯತ್ನ

ಬೀದಿ ನಾಯಿಗಳು ಕೊಡೋ ಕಾಟ ಅಷ್ಟಿಷ್ಟಲ್ಲ. ಹಾಗಂತ ಕೊಲ್ಲೋದಕ್ಕೆ ಪ್ರಾಣಿ ಪ್ರಿಯರು ಬಿಡಲ್ಲ. ವೈಜ್ಞಾನಿಕವಾಗಿ ನಾಯಿಗಳ ಸಂತಾನ ಹರಣ ಮಾಡಿದ್ರೆ, ಅದರಲ್ಲೂ ಗೋಲ್ ಮಾಲ್ ಮಾಡ್ತಾರೆ. ಮನೆಯಂಗಳಕ್ಕೆ ಬರೋ ಬೀದಿನಾಯಿಗಳಿಂದ ತಪ್ಪಿಸಿಕೊಳ್ಳೋಕೆ ಉಡುಪಿಯಲ್ಲಿ ಪರಿಹಾರೋಪಾಯವನ್ನು ಕಂಡುಕೊಂಡಿದ್ದಾರೆ.

ಉಡುಪಿಯ ಪರ್ಕಳದ ನಿವಾಸಿಯೊಬ್ಬರು ತಮ್ಮ ಹೊಸ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.ಈ ಊರು ತುಂಬಾ ಹುಚ್ಚುನಾಯಿಗಳದ್ದೇ ಕಾಟ. ಹೇಗಪ್ಪಾ ಬಚಾವಾಗೋದು ಅಂತ ತಲೆ ಕೆಡಿಸಿಕೊಂಡವರು ಕೊನೆಗೂ ಒಂದು ಪರಿಹಾರ ಕಂಡುಕೊಂಡಿದ್ದಾರೆ. ಬಟ್ಟೆಗೆ ಹಾಕುವ ನೀಲಿ ಬಣ್ಣವನ್ನು ನೀರಿಗೆ ಬರೆಸಿ, ಬಿಳಿ ಬಾಟಲಿಗಳಲ್ಲಿ ತುಂಬಿಸಿ ಗೋಡೆಯ ಸುತ್ತಲೂ ಜೋಡಿಸಿಟ್ಟಿದ್ದಾರೆ. ನಾಯಿಗಳು ಮನೆ ಕಡೆ ಮುಖ ಮಾಡಿನೂ ನೋಡ್ತಾ ಇಲ್ಲ.

ನಾಯಿ ಓಡಿಸೋಕೆ ಈ ವಿಧಾನ ಕರಾವಳಿ ಭಾಗದಲ್ಲಿ ಬಹಳ ಸಮಯದಿಂದ ಚಾಲ್ತಿಯಲ್ಲಿದೆ. ಪುಂಡಲೀಕ ಆಚಾರ್ಯ ಅವರು ವಿದೇಶದಲ್ಲಿ ಕೆಲಕಾಲ ನೆಲೆಸಿದ್ರು.ಅಲ್ಲೂ ಈ ವಿಧಾನ ಅನುಸರಿಸಲಾಗ್ತಿತ್ತಂತೆ. ಉಡುಪಿಯಲ್ಲಿ ಎಲ್ಲಿ ನೋಡಿದ್ರೂ ಬೀದಿ ನಾಯಿಗಳದ್ದೇ ಸಮಸ್ಯೆ, ಹುಚ್ಚುನಾಯಿಗಳ ಕಾಟ ಬೇರೆ. ಪ್ರತಿ ಮಾಸಿಕ ಸಭೆಯಲ್ಲೂ ಅದೇ ಚರ್ಚೆ. ಹಾಗಾಗಿ ಈ ನೀಲಿ ನೀರಿನ ಗೋಡೆ ವಿಧಾನ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗ್ತಿದೆ. ನಾಯಿಗಳಿಗೆ ಬಣ್ಣದ ಗುರುತಿಸುವಿಕೆ ಇಲ್ಲ ಅಂತಾರೆ. ಆದ್ರೂ ನಾಯಿಗಳು ಈ ನೀಲಿ ಬಾಟಲಿಗಳನ್ನು ಕಂಡು ಓಡೋದಂತೂ ಸತ್ಯ. ಹಗಲು ಮಾತ್ರವಲ್ಲ ರಾತ್ರಿಯೂ ನಾಯಿಗಳು ಇತ್ತಕಡೆ ಬರಲ್ಲ ಅಂತಾರೆ ಜನ.

ಮನೆಯಂಗಳಕ್ಕೆ ಬೀದಿನಾಯಿ ಬಂದ್ರೆ ಮಕ್ಕಳನ್ನು ಹೊರಗೆ ಬಿಡೋದಕ್ಕೆ ಭಯ, ಇನ್ನು ಬೀದಿನಾಯಿಗಳು ಗಲೀಜು ಮಾಡೋದೂ ಇದೆ. ಆದರೆ ಈ ನೀಲಿ ಬಾಟಲಿಗಳಿಂದ ನಾಯಿ ನಿಮ್ಮನೆ ಹತ್ರನೂ ಬರಲ್ಲ ಅಂತಾರೆ ಈ ಉಪಾಯ ಫಲಿಸಿದವರು.

Related posts

Leave a Reply