Header Ads
Header Ads
Header Ads
Breaking News

ಬೀಳ್ಕೊಡುಗೆ ಸಮಾರಂಭ

ಉಡುಪಿಯ ಆಯುರ್ವೇದ ಪಂಡಿತ್ ಅನಂತಯ್ಯ ನಾಯಕ್ ಮತ್ತು ಲಕ್ಷ್ಮಿಯವರ ಮಗಳಾಗಿ 24.11.1959ರಂದು ಜನಿಸಿದ ಶಕುಂತಳ ಇವರು 09.05.1985ರಂದು ಬೆಳಗಾಂನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯಕ್ಕೆ ಸೇರಿಕೊಂಡು ಬ್ರಹ್ಮಾವರ, ಅಂಬ್ಲಮೊಗರು ಮುಂತಾದ ಕಡೆ ಸೇವೆ ಸಲ್ಲಿಸಿರುವರು. 01.04.2016ರಂದು ಹೆಲ್ತ್ ವಿಸಿಟರಾಗಿ ಪದೋನ್ನತಿ ಪಡೆದು ಲೇಡಿ ಗೋಷ್ಚನ್ ಆಸ್ಪತ್ರೆ ವ್ಯಾಪ್ತಿಯ ಲೇಡಿ ಹಿಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಶಕ್ತಿನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವಹಿಸಿಕೊಂಡು ಎಲ್ಲರ ಮೆಚ್ಚುಗೆ ಪಡೆದಿರುವರು.ಇವರ ಪತಿ ರಾಮಕೃಷ್ಣ ನಾಯಕ್‌ರವರು ಕಮರ್ಷಿಯಲ್ ತೆರಿಗೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುತ್ತಾರೆ. ಆರತಿಗೊಬ್ಬ, ಕೀರ್ತಿಗೊಬ್ಬ ಎಂಬಂತೆ 1 ಗಂಡು 1 ಹೆಣ್ಣು ಮಕ್ಕಳನ್ನು ಹೊಂದಿರುತ್ತಾರೆ. ಶಕುಂತಳರವರು 30.11.2019ರಂದು ನಿವೃತ್ತಿ ಹೊಂದಿರುತ್ತಾರೆ. ಶಕ್ತಿನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹುಸೈನ್ ಮತ್ತು ಸಿಬ್ಬಂದಿ ವರ್ಗ, ಎಂಪಿಡಬ್ಲ್ಯೂ ಸುಪರ್‌ವೈಸರ್ ಲೋಕೇಶ್ ಹಾಗೂ ಎಂಪಿಡಬ್ಲ್ಯೂಗಳು, ಸ್ಪ್ರೇಯರ್‌ಗಳು ಮತ್ತು ಆಶಾ ಕಾರ್ಯಕರ್ತರು ಸೇರಿ ತಾ. 23.12.2019 ರಂದು ಹೆಲ್ತ್ ವಿಸಿಟರ್ ಶ್ರೀಮತಿ ಶಕುಂತಳರವರಿಗೆ ಬೀಳ್ಕೊಡುಗೆ ಸಮಾರಂಭವನ್ನು ನೆರವೇರಿಸಲಾಯಿತು ಎಂದು ವೈದ್ಯಾಧಿಕಾರಿ ಡಾ. ಹುಸೈನ್‌ರವರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿರುತ್ತಾರೆ.

Related posts

Leave a Reply

Your email address will not be published. Required fields are marked *