Header Ads
Breaking News

ಬೃಂದಾವನಸ್ತರಾದ ಉಡುಪಿ ಪೇಜಾವರ ಶ್ರೀಗಳು : ಮೂಡುಬಿದ್ರೆ ಸಮಾಜ ಮಂದಿರದಲ್ಲಿ ನಡೆದ ಶ್ರದ್ಧಾಂಜಲಿ ಸಭೆ

ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಹೀಗೆ ಯಾವುದೇ ಕ್ಷೇತ್ರವಾಗಿರಲಿ ಎಲ್ಲವನ್ನು ಸಮರ್ಥವಾಗಿ ಅರ್ಥೈಸಿ ನಿಭಾಯಿಸಬಲ್ಲ ವ್ಯಕ್ತಿತ್ವವನ್ನು ಹೊಂದಿರುವವರು ಪೇಜಾವರ ಶ್ರೀಗಳು ಎಂದು ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರ ಈಶ್ವರ ಭಟ್ ಹೇಳಿದರು.

ಅವರು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರು ಬೃಂದಾವನಸ್ತರಾದ ಹಿನ್ನಲೆಯಲ್ಲಿ ಸಮಾಜ ಮಂದಿರದಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ ಒಬ್ಬ ಒಳ್ಳೆಯ ಸಂತ, ದೊಡ್ಡ ಮೇಧಾವಿಯನ್ನು ಲೋಕ ಕಳೆದುಕೊಂಡಿದೆ ಎಂದು ಸಂತಾಪ ವ್ಯಕ್ತಪಡಿಸಿದ್ರು. ಈ ಸಂದರ್ಭ ಪುತ್ತಿಗೆ ದೇವಸ್ಥಾನದ ಅನಂತಕೃಷ್ಣ ಅಡಿಗಳ್, ಮಾಜಿ ಸಚಿವ ಕೆ.ಅಭಯಚಂದ್ರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮತ್ತಿತರರು ಸಂಸ್ಮರಣೆಗೈದರು.

Related posts

Leave a Reply

Your email address will not be published. Required fields are marked *