Header Ads
Header Ads
Header Ads
Breaking News

ಬೃಹತ್ ಆಯುರ್ವೇದ ವೈದ್ಯಕೀಯ ಶಿಬಿರ ಮೂಡುಬಿದಿರೆಯ ಆಳ್ವಾಸ್ ನಡೆದ ಕಾರ್ಯಕ್ರಮ

ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಂಗವಾಗಿ ಬೃಹತ್ ಆಯುರ್ವೇದ ಆಂಕರ್ ವೈದ್ಯಕೀಯ ಶಿಬಿರವು ನಡೆಯಿತು. ಇನ್ನೂ ಮೂಡುಬಿದಿರೆ ಶ್ರೀಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮನುಷ್ಯನ ಶರೀರದ ಸುಸ್ಥಿತಿಗೆ ಭಾರತೀಯ ಆಯುರ್ವೇದ ಪರಂಪರೆ ತನ್ನದೇ ಕೊಡುಗೆ ನೀಡುತ್ತಿದೆ. ಸ್ವಾಸ್ಥ್ಯ ಜೀವನಕ್ಕೆ ಆಯುರ್ವೇದ ಸಾಮಾನ್ಯ ಜ್ಞಾನ ಅಗತ್ಯ. ಆಯುರ್ವೇದ ಕುರಿತು ಜನಜಾಗೃತಿ ಆಳ್ವಾಸ್‌ನಿಂದ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಆಯುರ್ವೇದ ಮಹತ್ವ ಸಾರುವ ಪ್ರದರ್ಶನವನ್ನು ವಿಧಾನಪರಿಷತ್ ವಿಪಕ್ಷದ ಮುಖ್ಯಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಡಾ.ಕೃಷ್ಣರಾಜ ಭಟ್ ಶಿರ್ತಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ಜಯಶ್ರೀ ಅಮರನಾಥ ಶೆಟ್ಟಿ, ಡಾ.ವಿನಯ್ ಆಳ್ವ, ವಿವೇಕ್ ಆಳ್ವ ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ವಿನಯಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ವರದಿ : ಪ್ರೇಮಾಶ್ರಿ

Related posts

Leave a Reply