Header Ads
Header Ads
Breaking News

ಬೃಹತ್ ಉದ್ಯೋಗ ಮೇಳ-೨೦೧೭ ಆಗಸ್ಟ್ ೧೯ರಂದು ಪುತ್ತೂರಿನಲ್ಲಿ ಆಯೋಜನೆ ಶಾಸಕಿ ಶಕುಂತಳಾ ಶೆಟ್ಟಿ ಹೇಳಿಕೆ

 


ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ,ವಿದ್ಯಾಮಾತಾ ಪೌಂಡೇಶನ್ ಹಾಗೂ ಜಯಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ಆಗಸ್ಟ್ ೧೯ರಂದು ಪುತ್ತೂರಿನ ನೆಹರುನಗರದ ಸುದಾನ ವಸತಿ ಶಾಲೆಯಲ್ಲಿ ’ಬೃಹತ್ ಉದ್ಯೋಗ ಮೇಳ-೨೦೧೭’ ನಡೆಯಲಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು.ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಅವರು ಆ.೧೯ ರಂದು ಬೆಳಿಗ್ಗೆ ೯ ಗಂಟೆಯಿಂದ ಪ್ರಾರಂಭವಾಗುವ ಈ ಉದ್ಯೋಗ ಮೇಳದ ಮುಖಾಂತರ ಪುತ್ತೂರಿನ ಯುವಕ ಯುವತಿಯರಿಗೆ ಉದ್ಯೋಗ ದೊರೆತರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ. ಸುಮಾರು ೧೫೦ ಕಂಪೆನಿಗಳು ಇಲ್ಲಿ ಬಂದು ತಮಗೆ ಬೇಕಾದ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿ ನೇರ ನೇಮಕಾತಿ ಮಾಡಿಕೊಳ್ಳಲಿವೆ. ಸುಮಾರು ೪೦೦೦ ಸಾವಿರಕ್ಕೂ ಹೆಚ್ಚು ಉದ್ಯೋಗದ ಅವಕಾಶಗಳಿವೆ. ಈಗಾಗಲೇ ೧೭೦೦ ಮಂದಿ ಉದ್ಯೋಗಾಂಕ್ಷಿಗಳು ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಈ ಸಂದಭ್ದಲ್ಲಿ ಪುಡಾ ಅಧ್ಯಕ್ಷರಾದ ಕೌಶಲ್ ಶೆಟ್ಟಿ , ಜಯಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಉದ್ಯೋಗ ಮೇಳ ಸಮಿತಿಯ ಉಪಾಧ್ಯಕ್ಷ ಉಲ್ಲಾಸ್ ಕೋಟ್ಯಾನ್ ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply