Header Ads
Header Ads
Header Ads
Breaking News

ಬೃಹತ್ ಮೀಲಾದ್ ಜಲ್ಸ ಪ್ರಯುಕ್ತ ಮೀಲಾದ್ ಪ್ರಭಾಷಣ

ಸಯ್ಯಿದ್ ಮದನಿ ದರ್ಗಾ ಹಾಗೂ ಉಳ್ಳಾಲ ಜಮಾ‌ಅತಿನ ಅಂಗಸಂಸ್ಥೆ ಸಯ್ಯಿದ್ ಮದನಿ ಸೋಶಿಯಲ್ ಫ್ರಂಟ್ ವತಿಯಿಂದ ಬೃಹತ್ ಮೀಲಾದ್ ಜಲ್ಸ ಪ್ರಯುಕ್ತ ಮೀಲಾದ್ ಪ್ರಭಾಷಣ, ಅಭಿನಂದನಾ ಕಾರ್ಯಕ್ರಮ ಹಾಗೂ ಮಕ್ಕಳ ಪ್ರತಿಭಾ ಸಂಗಮ ಡಿ.6 ರಂದು ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು , ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ.ಮೋನು, ಉಪಾಧ್ಯಕ್ಷರುಗಳಾದ ಶಾಹುಲ್ ಹಮೀದ್, ನೆಕ್ಕರೆ ಬಾವ, ಸದಸ್ಯರಾದ ಯು.ಕೆ.ಮೋನು ಇಸ್ಮಾಯಿಲ್ ಹಾಗೂ ಯು.ಎಸ್.ಅಬೂಬಕ್ಕರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಉಳ್ಳಾಲದ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ನೆರವೇರಿಸಲಿದ್ದಾರೆ. ಸಚಿವ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಸಂಚಾಲಕರಾದ ಉಸ್ಮಾನ್ ಕಲ್ಲಾಪು, ಇಸ್ಮಾಯಿಲ್ ಪೊಡಿಮೋನು, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಅಯೂಬ್ ಮಂಚಿಲ, ಅರೆಬಿಕ್ ಟ್ರಸ್ಟ್ ಸದಸ್ಯ ಯು.ಕೆ.ಯೂಸುಫ್ ಉಪಸ್ಥಿತರಿದ್ದರು.

Related posts

Leave a Reply