Header Ads
Header Ads
Breaking News

ಬೃಹತ್ ರಕ್ತದಾನ ಶಿಬಿರ ಹಾಗೂ ವೈದ್ಯಕೀಯ ಶಿಬಿರ ಕಾಸರಗೋಡಿನ ಕುಂಜತ್ತೂರುನಲ್ಲಿ ಆಯೋಜನೆ

ತೂಮಿನಾಡು ನವಶಕ್ತಿ ಫ್ರೆಂಡ್ಸ್ ಸರ್ಕಲ್ ಹಾಗೂ ಕಾಸರಗೋಡು ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಮತ್ತು ದೇರಳಕಟ್ಟೆ ಯನಪೋಯ ಮೆಡಿಕಲ್ ಕಾಲೇಜು ಇವರ ಸಹಯೋಗದೊಂದಿಗೆ 37ನೇ ವಾರ್ಷಿಕೋತ್ಸವದ ಪ್ರಯುಕ್ತ ಕುಂಜತ್ತೂರು ಜಿ.ವಿ ಎಚ್.ಎಸ್.ಎಸ್‌ನಲ್ಲಿ ಬೃಹತ್ ರಕ್ತಾದಾನ ಶಿಬಿರ ಹಾಗೂ ವೈದ್ಯಕೀಯ ಶಿಬಿರ ನಡೆಯಿತು.

ಕೃಷ್ಣಾ ಶಿವ ಕೃಪಾ ಕುಂಜತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರಕ್ಕೆ ಡಾ.ಜಯಪಾಲ ಶೆಟ್ಟಿ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಇಂಡಿಯನ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಮನ್ಸೂರ್ ಮಾತನಾಡಿ ರಕ್ತದಾನ ಎಂಬುದು ಬಹಳ ಶ್ರೇಷ್ಟವಾದ ತ್ಯಾಗಗಳ್ಳೊಂದಾಗಿದೆ.ನಮ್ಮ ಊರಿನ ಸ್ಥಳೀಯರಿಗೆ ನಾನು ಪ್ರತ್ಯೇಕವಾದ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಹೃದಯ ತೊಂದರೆಯಲ್ಲಿ ಬಳಲುತ್ತಿರುವವರು ನನ್ನನ್ನು ಆಸ್ಪತ್ರೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂಬುದಾಗಿ ಮಾನವೀಯತೆಯ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ವೈದ್ಯರುಗಳಾದ ಖಾದರ್ ಎ, ದೀಪ್ತಿ ರಾಣಿ ಎನ್, ಹರೀಶ್ ಶೆಟ್ಟಿ ಮಾಡ ಹಾಗೂ ಆನಂದ ಮಾಸ್ಟರ್ ತೂಮಿನಾಡು ಉಪಸ್ಥರಿದ್ದರು. ಇಎನ್‌ಟಿ ವಿಭಾಗ, ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ನೇತ್ರಾ ತಪಾಸಣೆ, ಎಲುಬು ಮತ್ತು ಕೀಲು ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ ಗಳ ಶಿಬಿರದಲ್ಲಿ ನೂರಾರು ಮಂದಿ ಇದರ ಸದುಪಯೋಗವನ್ನು ಪಡಕೊಂಡರು

Related posts

Leave a Reply