Header Ads
Breaking News

ಬೆಂಕಿ ಅವಗಡ ಸುಟ್ಟು ಭಸ್ಮವಾದ ಮನೆ : ಸಹಾಯಧನ ನೀಡಿ ಸಾಂತ್ವಾನ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೊರಳಿ ಗ್ರಾಮದ ಖಾಜೆಸಾಬ ನದಾಫ್ ಎಂಬಾತನ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಈ ವೇಳೆ ಚಿನ್ನಾಭರಣ ಬೆಳ್ಳಿ ವಸ್ತುಗಳು ದವಸ ಧಾನ್ಯಗಳು ಸೇರಿದಂತೆ ದಿನಬಳಕೆ ವಸ್ತುಗಳು ಸಂಪೂರ್ಣ ಸುಟ್ಟು ಕಂಗಾಲಾದ ರೈತನಿಗೆ ಘಟನೆ ಬಗ್ಗೆ ತಿಳಿದು ಗುತ್ತಿಗೆದಾರ ರಾಜಕಾರಣಿ ಎಂಆರ್‌ಟಿ ಮೈಬೂಬಸಾಬ ತಾಂಬೋಳಿ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ವೈಯಕ್ತಿಕವಾಗಿ 25.000 ರೂ. ಸಹಾಯಧನ ನೀಡಿ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ್ ಮುಲ್ಲಾ, ತಾಲೂಕು ಅಧ್ಯಕ್ಷ ರಮೇಶ ಐಹೊಳೆ, ಇಬ್ರಾಹಿಂಸಾಬ ಗೋಗಿ, ಬಂದೇನಮಾಜ ಗೋಗಿ, ಮೊಹಮ್ಮದ್ ಅಷ್ಪಕ್ ಕರಜಗಿ, ಅಲ್ಲಿಸಾಬ ಹುಂಡೇಕರ, ಹಾಗೂ ಹಲವಾರು ಉಪಸ್ಥಿತರಿದ್ದರು. 

 

Related posts

Leave a Reply

Your email address will not be published. Required fields are marked *