Header Ads
Breaking News

ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ 70ನೇ ವಾರ್ಷಿಕ ಕ್ರೀಡೋತ್ಸವ

ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ 70ನೇ ವಾರ್ಷಿಕ ಕ್ರೀಡೋತ್ಸವವು ಬೆಂಗ್ರೆ ನದಿ ತಟದಲ್ಲಿ ನಡೆಯಿತು
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವಕೇಂದ್ರ, ಕರ್ನಾಟಕ ರಾಜ್ಯ ಫುಟ್‌ಬಾಲ್ ಅಸೋಸಿಯೇಶನ್, ಕರ್ನಾಟಕ ರಾಜ್ಯ ಈಜು ಅಸೋಸಿಯೇಶನ್, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ಗಳ ಅಂಗ ಸಂಸ್ಥೆಯ 70ನೇ ವಾರ್ಷಿಕ ಕ್ರೀಡೋತ್ಸವ ಬೆಂಗ್ರೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ತುಳುನಾಡ ಕೇಸರಿ ಕುಸ್ತಿ ಪ್ರಶಸ್ತಿ ವಿಜೇತ ದಯಾನಂದ್ ಆಮೀನ್ ಉದ್ಘಾಟಿಸಿದರು.
ಇದೇ ವೇಳೆ ಸಂಜಯ್ ಬೆಂಗ್ರೆ ಮಾತನಾಡಿ, ಬೆಂಗರೆ ವಿದ್ಯಾರ್ಥಿ ಸಂಘ ಯುವಕ ಮಂಡಲ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಇದೀಗ 70ನೇ ವಾರ್ಷಿಕ ಕ್ರೀಡೋತ್ಸವವನ್ನು ಹಮ್ಮಿಕೊಂಡಿದ್ದು, ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು.

ಇದೇ ವೇಳೆ ಅತ್ಲೆಟಿಕ್ಸ್, ಫುಟ್‌ಬಾಲ್, ಕ್ರಿಕೆಟ್, ಕಬಡ್ಡಿ, ತ್ರೋಬಾಲ್, ದೋಣಿ ಸ್ಪರ್ಧೆ, ಈಜು ಸ್ಪರ್ಧೆ, ಡ್ಯಾನ್ಸ್ ಸ್ಪರ್ಧೆಯಲ್ಲಿ ಅನೇಕ ಮಂದಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *