Header Ads
Breaking News

ಬೆಂಗರೆ ವೀರಭಾರತಿ ವ್ಯಾಯಾಮ ಶಾಲಾ ಆವರಣದಲ್ಲಿ ವಿ4 ನ್ಯೂಸ್‍ನ ಸಿಪಿಎಲ್ ಸೀಸನ್-2

ವಿ4 ನ್ಯೂಸ್‍ನ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2’ ಯಶಸ್ವಿಯಾಗಿ ತುಳುನಾಡಿನ ಜನರನ್ನು ನಕ್ಕುನಗಿಸುತ್ತಿದೆ. ಈವರೆಗಿನ ಲೀಗ್ ಪಂದ್ಯಗಳಲ್ಲಿ ಜನರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸಿತ್ತು. ಸಿಪಿಎಲ್ ಸೀಸನ್ 2 ಇದರ 10ನೇ ಸುತ್ತಿನ ಕಾಮಿಡಿ ಪ್ರದರ್ಶನ ಬೆಂಗರೆ ವೀರಭಾರತಿ ವ್ಯಾಯಾಮ ಶಾಲಾ ಆವರಣದಲ್ಲಿ ಮೇ 5ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ತುಳುನಾಡ ಕೇಸರಿ ಕುಸ್ತಿ ಪ್ರಶಸ್ತಿ ವಿಜೇತ ಬೆಂಗರೆ ವೀರಭಾರತಿ ವ್ಯಾಯಾಮ ಶಾಲೆ ಸುವರ್ಣ ಸಂಭ್ರಮದಲ್ಲಿದೆ. ಹಾಗೂ ಪಟ್ಟಾಭಿರಾಮ ದೇವರ ಬೆಳ್ಳಿಯ ಉಬ್ಬುಶಿಲ್ಪದ ಪ್ರತಿಷ್ಠಾಪನೆ ಹಾಗೂ 93ನೇ ವಾರ್ಷಿಕೋತ್ಸವವು ನಡೆಯಲಿದೆ. ಇದರ ಜೊತೆಗೆ ವಿ4 ನ್ಯೂಸ್ ಜನಪ್ರೀಯ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್ ಮನೋರಂಜಾ ಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ.

ಪಿಎಲ್ ಸೀಸನ್ 2 ದಲ್ಲಿ ಆರು ತಂಡಗಳ ನಡುವೆ ಸ್ಪರ್ಧೆ ನಡೆಯಲಿದ್ದು, ಮುಖ್ಯ ತೀರ್ಪುಗಾರರಾದ ಮೈಮ್ ರಾಮ್‍ದಾಸ್ ಮತ್ತು ಶಶಿರಾಜ್ ಕಾವೂರು ಅವರ ಜೊತೆಗೆ ವಿಶೇಷ ತೀರ್ಪುಗಾರರು ಆಗಮಿಸಲಿದ್ದು, ಸಿಪಿಎಲ್ ತಂಡಕ್ಕೆ ಪ್ರೋತ್ಸಾಹ ನೀಡಲಿದ್ದಾರೆ.

 ವಿ4 ನ್ಯೂಸ್‍ನ ಸಹಭಾಗಿತ್ವದಲ್ಲಿ ಸನ್‍ಪ್ರೀಮಿಯಮ್ ರಿಫೈನ್ಡ್ ಸನ್‍ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆಯುತ್ತಿರುವ ಸಿಪಿಎಲ್ ಸೀಸನ್ 2ಗೆ ಬೆವರೇಜ್ ಪಾರ್ಟ್‍ನರ್ ಆಗಿ ನಂದಿನಿ, ಯುಎಂ ರೆನಿಗೇಡ್, ಎಂಟರ್‍ಟೈನ್ಮೆಂಟ್ ಪಾರ್ಟ್‍ನರ್ ಆಗಿ ಸುಚಿತ್ರಾ ಪ್ರಭಾತ್ ಚಿತ್ರಮಂದಿರ ಮತ್ತು ಗ್ರೀನ್ ಎನರ್ಜಿ ಪಾರ್ಟ್‍ನರ್ ಆಗಿ ಕುಂಬ್ಳೆ ಸೋಲಾರ್ ಸಂಸ್ಥೆ ಸಹಯೋಗ ನೀಡುತ್ತಿದೆ. ಇದರ ಜೊತೆಗೆ ರಾಯಲ್ ಹೆವನ್ ರೋಸ್, ಒಲಿಂಪಿಕ್ ಸ್ಪೋಟ್ರ್ಸ್, ಕೆಎಂಸಿ ಆಸ್ಪತ್ರೆ, ಗೋಹೀಲ್, ಪ್ಲಾನೆಟ್ ಜಿ, ಆಪಲ್, ಫ್ಲಾಂಟ್ ಹೇರ್ ಫಿಕ್ಸಿಂಗ್, ಕಾರ್ ಡೆಕೋರ್, ಮೋತಿ ಮಹಲ್, ರೆನಾಲ್ಟ್, ಬಿಯುಮೋಂಡ್, ಡಿಜಿಟಲ್ ಪ್ಲಾನೆಟ್, ರೆಡ್‍ಎಫ್‍ಎಂ, ಎಸ್‍ಡಿಎಂ ಕಾಲೇಜು ಉಜಿರೆ ಮತ್ತು ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಸಿಪಿಎಲ್ 2 ಜನಮನ ರಂಜಿಸುತ್ತಿದೆ.

Related posts

Leave a Reply

Your email address will not be published. Required fields are marked *