Header Ads
Breaking News

ಬೆಂಗಳೂರಿನಲ್ಲಿ ನೀರಾ ಬಾರ್ ಗಳಿಗೆ ಅಬಕಾರಿ ಇಲಾಖೆ ಅನುಮತಿ ನೀಡಿರೋದು ಅಬಕಾರಿ ಸಚಿವರಿಗೆ ಗೊತ್ತೇ ಇಲ್ವಂತೆ..!

ಬೆಂಗಳೂರಿನಲ್ಲಿ ಹತ್ತಕ್ಕೂ ಓಪನ್ ನೀರಾ ಬಾರ್ ಗಳಿಗೆ ಅಬಕಾರಿ ಇಲಾಖೆ ಅನುಮತಿ ನೀಡಿರುವ ಸಂಗತಿ ಸ್ವತಃ ಅಬಕಾರಿ ಸಚಿವರಿಗೆ ತಿಳಿದಿಲ್ಲವಂತೆ. ನೀರಾ ಬಾರ್ ಬಗ್ಗೆ ಮಾದ್ಯಮಗಳು ಇಂದು ಪ್ರಶ್ನಿಸುತ್ತಿದ್ದಂತೆ ಅಬಕಾರಿ ಸಚಿವ ನಾಗೇಶ್ ಅವರ ಮುಖದಲ್ಲಿ ಅಚ್ಚರಿ ಕಂಡು ಬಂತು. ಅವರು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿ, ನನ್ನ ಗಮನಕ್ಕೆ ತಾರದೆ ಅಧಿಕಾರಿಗಳು ಅನುಮತಿ ನೀಡಿರಬೇಕು. ಬೆಂಗಳೂರು ತಲುಪಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸುತ್ತೇನೆ ಎಂದರು. ತೆಂಗು ಬೆಳೆಗಾರರಿಗೆ ಉತ್ತೇಜನ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜಧಾನಿಯ ಹತ್ತಕ್ಕೂ ಅಧಿಕ ಕಡೆಗಳಲ್ಲಿ ನೀರಾ ಬಾರ್ ತೆರೆಯಲು ಇಲಾಖೆ ಅನುಮತಿ ನೀಡಿದೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾದ್ಯಮಗಳಿಗೆ ಅಭಿಪ್ರಾಯ ತಿಳಿಸುತ್ತೇನೆ ಎಂದು ಅವರು ತಿಳಿಸಿದರು.

Related posts

Leave a Reply

Your email address will not be published. Required fields are marked *