Header Ads
Header Ads
Breaking News

ಬೆಂಗಳೂರು ಎಂ ಆರ್ ಜಿ ಗ್ರೂಪ್‌ನ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿಯವರಿಗೆ ಅಭಿನಂದನೆ

ಬೆಂಗಳೂರು ಎಂ ಆರ್ ಜಿ ಗ್ರೂಪ್‌ನ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿಯವರ 60ನೇ ಹುಟ್ಟು ಹಬ್ಬದ ಆಚರಣೆ ನಡೆಸುವುದಕ್ಕಾಗಿ, ಎಲ್ಲಾ ಸಮಾಜದ ಮುಖ್ಯಸ್ಥರನ್ನು ಸೇರಿಸಿಕೊಂಡು ಪಡುಬಿದ್ರಿ ಬಂಟರ ಭವನದಲ್ಲಿ ನಡೆಸಿದ ಸಾರ್ವಜನಿಕ ಸಮಾಲೋಚನಾ ಸಭೆ ಯಶಸ್ವಿಯಾಗಿ ನಡೆದೀದೆ.
ಈ ಸಂದರ್ಭ ಮಾತನಾಡಿ ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಸಮಾಜೋಮುಖಿ ಚಿಂತಕ, ವರ್ಗ ಭೇದವಿಲ್ಲದ ಕೊಡುಗೈದಾನಿ, ರಾಜೋತ್ಸವ ಪುರಸ್ಕೃತ ಕೆ. ಪ್ರಕಾಶ್ ಶೆಟ್ಟಿಯವರ 60 ವರ್ಷಾಚರಣೆಯನ್ನು ಪ್ರಕಾಶಾಭಿನಂದನೆ ಎಂಬ ಹೆಸರಲ್ಲಿ ಎಲ್ಲಾ ಜಾತಿ ಧರ್ಮಗಳ ಮಂದಿ ಸೇರಿ ಮಂಗಳೂರು ಗೋಲ್ಡ್ ಫಿಂಚ್ ಹೋಟೆಲಿನ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದರು(ಬೈಟ್)ಅಭಿನoದನಾ ಸಮಾರಂಭ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಇದು ವ್ಯಕ್ತಿ ಪೂಜೆಯಲ್ಲ…… ವ್ಯಕ್ತಿತ್ವದ ಪೂಜೆಯಾಗಿದೆ, ಜನ ಮೆಚ್ಚಿದ ವ್ಯಕ್ತಿತ್ವದ ಪ್ರಕಾಶ್ ಶೆಟ್ಟಿಯವರ 60 ನೇ ವರ್ಷಾಚರಣೆಯನ್ನು ಬಹಳ ಅದ್ಧೂರಿಯಾಗಿ ನಡೆಸುವ ನಿಟ್ಟಿನಲ್ಲಿ ವಿವಿದೆಡೆ ಸಮಾಲೋಚನಾ ಸಭೆಗಳು ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ಪಡುಬಿದ್ರಿಯಲ್ಲೋ ನಡೆದಿದೆ ಎಂದರು. ಪಡುಬಿದ್ರಿ ಬೀಡು ಅರಸ ರತ್ನಾಕರ್ ರಾಜ್ ಸಭೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ಗೊಳಿಸಿದ್ದಾರೆ. ಈ ಸಂದರ್ಭ ರಾಜಕೀಯ ಪ್ರಮುಖರಾದ ಐವನ್ ಡಿಸೋಜ, ವಿನಯ ಕುಮಾರ್ ಸೊರಕೆ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಶಶಿಕಾಂತ್ ಪಡುಬಿದ್ರಿ, ಶೇಖರ್ ಹೆಜಮಾಡಿ, ನೀತಾ ಗುರುರಾಜ್, ವೈ. ಸುಧೀರ್ ಕುಮಾರ್, ಮಧು ಆಚಾರ್ಯ ಮುಂತಾದವರಿದ್ದರು.

Related posts

Leave a Reply

Your email address will not be published. Required fields are marked *