Header Ads
Breaking News

ಬೆಂಗಳೂರು ಮಾದರಿಯಲ್ಲಿ ರಕ್ಷಣಾ ಘಟಕ. ಉಡುಪಿ ಮತ್ತು ಮಂಗಳೂರಿನಲ್ಲಿ ರಚನೆ. ಉಡುಪಿಯಲ್ಲಿ ಗೃಹರಕ್ಷಕದಳದ ಐಜಿಪಿ ಡಿ.ರೂಪ ಹೇಳಿಕೆ.

ಬೆಂಗಳೂರು ಮಾದರಿಯಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ನಾಗರೀಕ ರಕ್ಷಣಾ ಘಟಕ ರಚಿಸಲಾಗುವುದು ಎಂದು ರಾಜ್ಯ ಗೃಹರಕ್ಷಕ ದಳ ಹಾಗೂ ನಾಗರೀಕ ರಕ್ಷಣಾ ಇಲಾಖೆಯ ಐಜಿಪಿ ಡಿ.ರೂಪ ತಿಳಿಸಿದ್ದಾರೆ.ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಚೇರಿಗೆ ಬಂದ ರೂಪ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ನಾಗರೀಕ ರಕ್ಷಣಾ ಘಟಕದ ಕಟ್ಟದ ನಿರ್ಮಾಣವಾಗಿದ್ದು ಮುಖ್ಯ ವಾರ್ಡನ್‌ಗಳ ನೇಮಕಾತಿ ಪ್ರಕ್ರೀಯೆ ಆರಂಭವಾಗಿದೆ.

ಕಾರವಾರದಲ್ಲಿ10 ಮಂದಿ, ಮಂಗಳೂರಿನಲ್ಲಿ ಮೂವರು, ಉಡುಪಿಯಲ್ಲಿ ಇಬ್ಬರು ಅರ್ಜಿ ಹಾಕಿದ್ದಾರೆ. ನೇಮಕಾತಿ ಸಮಿತಿ ಅಂತಿಮ ಆಯ್ಕೆ ಪ್ರಕ್ರೀಯೆ ನಡೆಸಲಿದೆ ಅಂತ ಮಾಹಿತಿ ನೀಡಿದರು. ಪ್ರಾಕೃತಿಕ ವಿಕೋಪಗಳು ಎದುರಾದಾಗ ನಾಗರೀಕರ ರಕ್ಷಣೆ ಧಾವಿಸುವುದು, ಪ್ರವಾಹ ಬಂದಾಗ ಲಭ್ಯ ವಸ್ತುಗಳನ್ನು ಬಳಸಿ ತೆಪ್ಪ ಕಟ್ಟುವುದು, ಬೋಟ್ ನಿರ್ಮಿಸುವುದು ತುರ್ತು ರಕ್ಷಣಾ ಕಾರ್ಯಕ್ಕೆ ಅಗತ್ಯ ಸಾಮಗ್ರಿಗಳನ್ನು ಸಿದ್ದಪಡಿಸುವ ಬಗ್ಗೆ ತರಭೇತಿ ನೀಡಲಾಗುವುದು ಎಂದರು.

Related posts

Leave a Reply