Header Ads
Breaking News

ಬೆಂಗ್ರೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಮಹಾಜನ ಸಭಾ ಬೆಂಗ್ರೆ ವತಿಯಿಂದ ಬೆಂಗ್ರೆಯ ಪ್ರದೇಶವನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ಚಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಳೆದ ಕೆಲವು ದಿನಗಳಿಂದ ಸ್ವಚ್ಛ ಬೆಂಗ್ರೆ ಪರಿಕಲ್ಪನೆಯಲ್ಲಿ ಸಮಗ್ರ ಬೆಂಗ್ರೆಯ ಪ್ರದೇಶವನ್ನು ಸ್ವಚ್ಚ ಹಾಗೂ ನೈರ್ಮಲ್ಯದ ಹೊಣೆ ಹೊತ್ತು ಊರ ಹಾಗೂ ಪರವೂರ ವಿವಿಧ ಸಂಘ ಸಂಸ್ಥೆಗಳು ಸ್ವಚ್ಛತೆ  ಮಾಡಿದಲ್ಲದೆ, ಮಹಾಜನ ಸಬಾ ಬೆಂಗರೆ ವತಿಯಿಂದ ಜೆಸಿಬಿಯ ಮುಖಾಂತರ ಸ್ವಚ್ಛ ಮಾಡಲಾಗಿದೆ.

ಈ ಬಗ್ಗೆ ಬೆಂಗ್ರೆ ಮಹಾಜನ ಸಭಾದ ಅಧ್ಯಕ್ಷರಾದ ಚೇತನ್ ಬೆಂಗ್ರೆ ಮಾತನಾಡಿ, ಬೆಂಗ್ರೆ ಪರಿಸರವನ್ನು ಸಂಪೂರ್ಣ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿದ್ದೇವೆ. ಕೆಲವೊಂದು ಜನರು ಸಾರ್ವಜನಿಕ ಪ್ರದೇಶದಲ್ಲಿ ಕಸ-ಕಡ್ಡಿ ಹಾಗೂ ತ್ಯಾಜ್ಯಗಳನ್ನು ಹಾಕಿರುವುದು ಕಂಡುಬಂದಿರುತ್ತದೆ. ಮುಂದಿನ ದಿನಗಳಲ್ಲಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಕಸ ಹಾಕುವುದು ಕಂಡುಬಂದಲ್ಲಿ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

Related posts

Leave a Reply

Your email address will not be published. Required fields are marked *