Header Ads
Breaking News

ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲ(ರಿ)70ನೇ ವಾರ್ಷಿಕೋತ್ಸವದ ಸಂಭ್ರಮ

ಮಂಗಳೂರಿನ ಬೆಂಗ್ರೆ ವಿದ್ಯಾರ್ಥಿ ಯುವಕ ಮಂಡಲ(ರಿ)ನ 70ನೇ ವಾರ್ಷಿಕೋತ್ಸವವೂ ದಿವಾಂಗತ ಐತು ಸುವರ್ಣ ಸ್ಮಾರಕ ಕಲಾಮಂಟಪದಲ್ಲಿ ಜರುಗಿತ್ತು. ಈ ವೇಳೆ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯ್ತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಬೆಂಗ್ರೆ ವಿದ್ಯಾರ್ಥಿ ಯುವಕ ಮಂಡಲ ಇದೀಗ 70ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಕಾರ್ಯಕ್ರಮವನ್ನು ಮಹಾಜನಾ ಸಭಾ ಅಧ್ಯಕ್ಷರಾದ ಮೋಹನ್ ಬೆಂಗ್ರೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು.

ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಚೇರ್‍ಮೆನ್ ಶಾಂತರಾಮ್ ಶೆಟ್ಟಿ ವಹಿಸಿದ್ರು. ನಳಿಕ ಮಾತನಾಡಿದ ಅವರು, ಇಂದಿನ ವಾರ್ಷಿಕೋತ್ಸವದಲ್ಲಿ ಹಬ್ಬದ ಸಂಭ್ರಮ ನೆಲೆಯಾಗಿದೆ. ಇಲ್ಲಿನ ಜನರ ಬಗ್ಗೆ ಈ ವಿದ್ಯಾಸಂಸ್ಥೆ ಕಾಳಜಿ ವಹಿಸಿ ಉತ್ತಮ ಕಾರ್ಯವನ್ನ ಮಾಡ್ತಾ ಬಂದಿದೆ ಎಂದ್ರು. ಇನ್ನು ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದ ಅಧ್ಯಕ್ಷರಾದ ಸಂಜಯ್ ಸುವರ್ಣ ಬೆಂಗ್ರೆ ಸ್ವಾಗತಿಸಿದ್ರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇನ್ನು ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಬಹುಮಾನ ವಿತರಣೆಯನ್ನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಉಚ್ಚಿಲ ಮಹಾಜನ ಸಂಘದ ಉಪಾಧ್ಯಕ್ಷರಾದ ದೇವದಾಸ್ ಬೋಳೂರು, ಮೊಗಚವೀರ ಯುವ ವೇದಿಕೆಯ ಅಧ್ಯಕ್ಷರಾದ ಜಗದೀಶ್ ಬಂಗೇರ, ಎಸ್‍ಎಎಮ್ ಫಿಶರೀಸ್ ಮಾಲಕರಾದ ಸಿಂಧುರಾಮ್, ಬೈಕಂಪಾಡಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಮಧುಕರ್ ಕಾಂಚನ್ ಎನ್‍ಎಮ್‍ಪಿಟಿ, ಬೆಂಗ್ರೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯನಿ ವಿನೋದ ಅಮೀನ್ ಭಾಗವಹಿಸಿದ್ರು.

Related posts

Leave a Reply

Your email address will not be published. Required fields are marked *