Header Ads
Header Ads
Breaking News

ಬೆಜ್ಜ ಎಂ.ನಾರಾಯಣ ಹೆಗ್ಡೆ ಚರಮ ಸಂಸ್ಮರಣೆ : ಫೆಬ್ರವರಿ 15ರಂದು ಟ್ರಸ್ಟ್‌ನ ಉದ್ಘಾಟನೆ

ಮಂಜೇಶ್ವರ : ತುಳುನಾಡ ಮಣ್ಣಿನಲ್ಲಿ ಪ್ರಬಲವಾದ ರೈತ ಚಳುವಳಿಯನ್ನು ಸಂಘಟಿಸುವುದರ ಮೂಲಕ ಜಮೀನ್ದಾರಿ ಪದ್ದತಿಗೆದುರಾಗಿ ಹೋರಾಡಿ ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟಿ ಬೆಳೆಸುವುದಕ್ಕೆ ನಿಸ್ವಾರ್ಥವಾಗಿ ಶ್ರಮಿಸಿದ ಬೆಜ್ಜದ ಗುತ್ತು ಎಂ.ನಾರಾಯಣ ಹೆಗ್ಡೆಯವರ 10 ನೇ ಚರಮ ವಾರ್ಷಿಕ ಹಾಗೂ ಟ್ರಸ್ಟ್ ನ ಉದ್ಘಾಟನೆ ಫೆಬ್ರವರಿ 15 ಕ್ಕೆ ನಡೆಯಲಿದೆಯೆಂದು ಸಂಘಟಕ ಸಮಿತಿ ಕಾರ್ಯದರ್ಶಿ ಬಿ.ವಿ ರಾಜನ್ ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಬೆಳಿಗ್ಗೆ 9 ಘಂಟೆಗೆ ಅವರ ನಿವಾಸ ಸಮೀಪದ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ನಡೆಯಲಿದೆ. ಕೇರಳ ತುಳು ಅಕಾಡೆಮಿ ಸದಸ್ಯ ರಾಮಕೃಷ್ಣ ಕಡಂಬಾರ್ ಅಧ್ಯಕ್ಷತೆಯಲ್ಲಿ ಸಿ.ಪಿ.ಐ ಪಕ್ಷದ ಹಿರಿಯ ಕಾರ್ಯಕರ್ತರಾದ ವಾಸು ಸಫಲ್ಯ ಪುಷ್ಪಾರ್ಚನೆ ನಡೆಸಲಿರುವರು. ಸಂಜೆ ೪ ಘಂಟೆಗೆ ಬೆಜ್ಜದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಂ.ನಾರಾಯಣ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನೆ ಹಾಗೂ “ಭೂ ಮಸೂದೆಯೂ ಆ ಬಳಿಕದ ಕೇರಳವೂ”ಎಂಬ ವಿಷಯದಲ್ಲಿ ಉಪನ್ಯಾಸ ಹಾಗೂ ಅಭಿಪ್ರಾಯ ಮಂಡನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿ ಗೋಷ್ಟಿಯಲ್ಲಿ ಬಿ.ವಿ ರಾಜನ್ , ಜಯರಾಮ ಬಲ್ಲಂಗುಡೇಲು , ಎಂ.ಗೋವಿಂದ ಹೆಗ್ಡೆ , ರಾಮಕೃಷ್ಣ ಕಡಂಬಾರು ,ಸಂಕಬೈಲು ಸತೀಶ್ ಅಡಪ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *