Header Ads
Header Ads
Breaking News

ಬೆಳಗಾವಿ ಶಹಪುರ ಸೀರೆ, ಜಿ‌ಎಸ್‌ಟಿ ಹೊರೆಯಿಂದ ತತ್ತರ

ಹೊಸದಾಗಿ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಬೆಳಗಾವಿ ಜಿಲ್ಲೆಯ ಸಾವಿರಾರು ನೇಕಾರರಿಗೆ ಹೊರೆಯಾಗಿ ಪರಿಣಮಿಸಿದೆ.
ಇಲ್ಲಿನ ಶಹಾಪುರದ ವಡಗಾವಿಯ ಮಗ್ಗಗಳಲ್ಲಿ ಸಿದ್ಧಗೊಳ್ಳುವ ಶಹಾಪುರ ಸೀರೆ ಎಂದೇ ಖ್ಯಾತಿ ಗಳಿಸಿರುವ ಸೀರೆಗಳಿಗೆ ಈ ಹಿಂದೆ ಶೇ. ೧೨ರಿಂದ ೧೪ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಜಿ‌ಎಸ್ಟಿ ಜಾರಿಯಾದನಂತರ ಶೇ. ೨೩.೫೦ಕ್ಕೆ ಏರಿಕೆ ಮಾಡಲಾಗಿದೆ. ತೆರಿಗೆಯ ಪ್ರಮಾಣ ಒಮ್ಮೆಲೇ ದ್ವಿಗುಣಗೊಂಡಿರುವುದು ನೇಕಾರರು ಮತ್ತು ಕುಟುಂಬದವರಿಗೆ ಬರಸಿಡಿಲು ಬಡಿದಂತಾಗಿದೆ. ವಹಿವಾಟು ಕುಸಿಯುವ ಹಾಗೂ?ನಷ್ಟ ಎದುರಾಗುವ ಆತಂಕ ಅವರನ್ನು ಕಾಡುತ್ತಿದೆ.
ಶಹಾಪುರ ಸೀರೆಗಳ ಕಚ್ಚಾ ಪದಾರ್ಥಗಳ ಪಾಲಿಸ್ಟರ್ ಯಾರ್ನ್ ಖರೀದಿ ಮೇಲೆ ಶೇ. ೧೮ರಷ್ಟು ಜಿ‌ಎಸ್ಟಿ ವಿಧಿಸಲಾಗಿದೆ. ಸೀರೆ ಖರೀದಿಸುವಾಗ ಶೇ. ೫.೫೦ರಷ್ಟು ಜಿ‌ಎಸ್ಟಿಯನ್ನು ನೀವೇ ತುಂಬಬೇಕು ಎಂದು ಮಧ್ಯವರ್ತಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ಸೀರೆಯೊಂದಕ್ಕೆ ಒಟ್ಟಾರೆ ಶೇ. ೨೩.೫೦ರಷ್ಟು ತೆರಿಗೆಯನ್ನು ನಾವೇ ಕಟ್ಟಬೇಕಾಗಿದೆ. ಹಿಂದೆ ಕನಿಷ್ಠ ಶೇ. ೧೨ರಿಂದ ಗರಿಷ್ಠ ಶೇ. ೧೪ರವರೆಗೆ ಪಾವತಿಸುತ್ತಿದ್ದೆವು. ಹೊಸ ವ್ಯವಸ್ಥೆಯಿಂದ ನೇಕಾರರಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದವರು ತಿಳಿಸಿದರು.

Related posts

Leave a Reply