Breaking News

ಬೆಳಪುವಿನ ಬಡ ಕುಟುಂಬಕ್ಕೆ ಬೇಕಾಗಿದೆ ಸಹೃದಯಿಗಳ ಸಹಾಯ ಹಸ್ತ, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಅವಳಿ ಬಾಲಕರು


ಅಟೋರಿಕ್ಷಾ ಚಲಾಯಿಸಿ ಜೀವನ ನಡೆಸುತ್ತಿರುವ ವ್ಯಕ್ತಿಯ ಇಬ್ಬರು ಮಕ್ಕಳು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಆ ಮಕ್ಕಳ ಹೆತ್ತವರು ಸಹೃದಯಿಗಳ ನೆರವನ್ನು ಕೋರುತ್ತಿದ್ದಾರೆ.
ಬೆಳಪು ಗ್ರಾಮದ ಪ್ರಸಾದ್ ನಗರದ ಮೂರು ಸೇಂಟ್ಸ್ ಸರ್ಕಾರಿ ಸ್ಥಳದಲ್ಲಿ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವ ರಜೀನಾ ಕಲೀಂ ಮುಸ್ಲಿಂ ದಂಪತಿಗಳಿಗೆ ಮೂರು ಮಕ್ಕಳು ಅವರಲ್ಲಿ ಮೊಹಮ್ಮದ್ ಸೈಯ್ಯದ್ ಹಾಗೂ ಮೊಹಮ್ಮದ್ ಫಯಾಝ್ ಈ ಇಬ್ಬರು ಮಕ್ಕಳು ಹುಟ್ಟಿನಲ್ಲೇ ಹಿಮೋಪಿಲೀಯಾ ಎಂಬ ವಿಚಿತ್ರ ರೋಗಕ್ಕೆ ತುತ್ತಾದ ಪುಟಾಣಿಗಳು. ಆರಂಭದಲ್ಲಿ ಈ ರೋಗದ ಪ್ರಭಾವ ಅಷ್ಟೇನು ಇಲ್ಲದಿದ್ದರೂ ಇದೀಗ ವಿಪರೀತವಾಗುತ್ತಿದೆ. ಕೈ ಕಾಲಿನ ಗಂಟುಗಳು ಉದಿಕೊಂಡಿದ್ದು ಮಕ್ಕಳು ಬಾರೀ ನೋವು ಅನುಭವಿಸುತ್ತಿದ್ದಾರೆ. ಸ್ಥಳೀಯ ಸರ್ಕಾರಿ ಶಾಲೆಗೆ ಈ ಮಕ್ಕಳು ಹೋಗುತ್ತಿದ್ದರೂ ತಂದೆ ಅಟೋರಿಕ್ಷಾದಲ್ಲಿ ಬಿಡುವುದು ಕರೆತರುವುದು ಮಾಡಬೇಕಾಗಿದೆ. ನೋವು ಕಾಣಿಸಿಕೊಂಡಾಗ ಮಾತ್ರ ಶಾಲೆಗೆ ವಾರಗಟ್ಟಲೆ ರಜೆ ಅನಿರ್ವಾಯ.
ಇವರಿಗೆ ಚಿಕಿತ್ಸೆ ನೀಡುತ್ತಿರುವವರು ಮಣಿಪಾಲದ ವೈಧ್ಯ ಡಾ| ಕುರಿಯನ್. ಇವರು ಹೇಳುವಂತೆ ಈ ರೋಗ ಶಾಶ್ವತವಾಗಿ ಗುಣಮುಖ ಹೊಂದುವ ಚಿಕಿತ್ಸೆ ಈವರಗೆ ನಮ್ಮಲ್ಲಿಲ್ಲ. ಬಿಳಿ ರಕ್ತಕಣಗಳು ಉತ್ಪತ್ತಿ ಮಾಡುವ ವ್ಯವಸ್ಥೆಯೇ ದೇಹದಲ್ಲಿ ಇಲ್ಲದ ಕಾರಣ ಈ ರೋಗ ಭಾದಿಸುತ್ತಿದೆ. ಗಾಯವಾಗಿ ರಕ್ತಸ್ರಾವವಾದರೆ ಸುಮಾರು ಹನ್ನೊಂದು ಸಾವಿರ ರೂಪಾಯಿ ಮುಖಬೆಲೆಯ ಚುಚ್ಚುಮದ್ದು ನೀಡಿ ರಕ್ತಸ್ರಾವ ನಿಲ್ಲಿಸಬೇಕಾಗಿದೆ. ಅದೂ ಕೂಡಾ ಈ ಚುಚ್ಚು ಮದ್ದಿನ ಪ್ರಭಾವ ದೇಹದಲ್ಲಿ ಕೇವಲ ಎಂಟು ಗಂಟೆಗಳು ಮಾತ್ರ ಇರುತ್ತವೆ ಎನ್ನುತ್ತಾರೆ.
ಅಟೋರಿಕ್ಷಾ ಚಲಾಯಿಸಿಕೊಂಡು ಅದರಿಂದ ಬರುವ ಆದಾಯ ಜೀವನ ಸಾಗಿಸುವುದಕ್ಕೆ ಸಾಕಾಗೋಲ್ಲ. ಹಾಗಿರುವಾಗ ಪದೇ ಪದೇ ಈ ಮಕ್ಕಳ ಆರೋಗ್ಯ ಕೈಕೊಡುತ್ತಿರುವ ಸಂದರ್ಭ ಆಸ್ಪತ್ರೆಗೆ ಖರ್ಚು ಮಾಡಲು ನಮ್ಮಿಂದ ಅಸಾಧ್ಯವಾಗಿದೆ. ಈ ಬಗ್ಗೆ ನಮಗೆ ಸರ್ಕಾರದಿಂದ ಏನಾದರೂ ಸಹಾಯ ಮಾಡುವಂತೆ ಬೇಡಿ ಬಹಳಷ್ಟು ಮನವಿಗಳನ್ನು ಸರ್ಕಾರಿ ಅಧಿಕಾರಿಗಳು ಸಹಿತ ರಾಜಕೀಯ ವ್ಯಕ್ತಿಗಳಲ್ಲಿ ನೀಡಿದ್ದೇವೆ. ಸಿಗುತ್ತೆ ಎನ್ನುತ್ತಾರೆ ಆದರೆ ಈವರಗೆ ನಮಗೆ ಯಾವುದೇ ಪರಿಹಾರ ಮೊತ್ತ ದೊರಕಿಲ್ಲ. ಕಷ್ಟ ಜೀವನ ನಡೆಸುತ್ತಿರುವ ನಾವು ಅದೇಷ್ಟೋ ಸಲ ಆತ್ಮಹತ್ಯೆಗೆ ಮನ ಮಾಡಿದ್ದೇವೆ ಆದರೆ ಮಕ್ಕಳ ಮುಖ ನೋಡಿ ಅದರಿಂದ ಹಿಂದೆ ಸರಿಯುವಂತಾಗಿದೆ. ಸರ್ಕಾರ ಸಹಿತ ಸಹೃದಯಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸುವ ಮೂಲಕ ನಮ್ಮ ಕರುಳ ಕುಡಿಗಳನ್ನು ಉಳಿಸಿಕೊಡುವಂತೆ ಮಕ್ಕಳ ಹೆತ್ತವರು ಕಣ್ಣೀರಿಡುತ್ತಾರೆ. ಸಹಾಯ ಮಾಡಲು ಇಚ್ಚಿಸುವವರು ಕಾಪು ವಿಜಯ ಬ್ಯಾಂಕ್‌ನಲ್ಲಿರುವ ಮಕ್ಕಳ ತಾಯಿ ರಜೀನ ಹೆಸರಲ್ಲಿರುವ ಖಾತೆ ಸಂಖ್ಯೆ: 111601011003466 (ಐಎಸ್‌ಎಫ್‌ಸಿ: ವಿಐಜೆಬಿ 301116)ಗೆ ಕಳುಹಿಸ ಬಹುದಾಗಿದೆ.

Related posts

Leave a Reply