Header Ads
Header Ads
Breaking News

ಬೆಳಪು ಶಾಲೆ: ಮಕ್ಕಳ ಭವಿಷ್ಯ ಜನರ ಸಂಪತ್ತು,  ಮಾಜೀ ಮಂತ್ರಿ ವಿನಯ ಕುಮಾರ್ ಸೊರಕೆ


ಸರಕಾರದ ಮೂಲಕ ಶಾಲೆಗಳಿಗೆ ದೊರಕುವ ವಿವಿಧ ಸವಲತ್ತುಗಳನ್ನು ಮಕ್ಕಳಿಗೆ ವಿತರಿಸುವ ಹಾಗೂ ಶಾಲಾ ಕುಂದುಕೊರತೆಗಳ ಬಗ್ಗೆ, ಶಾಲಾಭಿವೃದ್ಧಿ ಸಮಿತಿ ರಚನೆ, ಶೈಕ್ಷಣಿಕ ಚಟುವಟಿಕೆಗಳ ವಿಷಯ ಚರ್ಚಿಸುವ ಸಲುವಾಗಿ ಕಾಪು ಕ್ಷೇತ್ರ ಶಾಸಕ ವಿನಯಕುಮಾರ್ ಸೊರಕೆ ಬೆಳಪು ಸರಕಾರಿ ಸಂಯುಕ್ತ ಪ್ರೌಢ ಶಾಲೆಗೆ ಭೇಟಿ ನೀಡಿದರು.
ಅನಂತರ ಮಾತನಾಡಿದ ಶಾಸಕರು, ಇಂದು ಆಂಗ್ಲ ಭಾಷಾಭಿಮಾನದಿಂದ ಮಹತ್ವವನ್ನು ಕಳೆದುಕೊಳ್ಳುತ್ತಿರುವ ನಮ್ಮ ಹಿರಿಯರು ಕಲಿತ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಭವಿಷ್ಯವನ್ನು ಮುತ್ತಾಗಿಸುವ ದೃಷ್ಠಿಯಲ್ಲಿ ಸಮಾಜವು ಸಹಕರಿಸಬೇಕು. ಮಕ್ಕಳ ಭವಿಷ್ಯವೇ ನಮ್ಮ ಸಂಪತ್ತಾಗಿದೆ. ಆರ್ಥಿಕವಾಗಿ ಹಿಂದುಳಿದ ಜನರ ಆಧಾರವಾಗಿಸುವ ಯೋಜನೆಗಳ ಮೂಲಕ ಶಾಲಾ ಅವಶ್ಯಕತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಪ್ರೌಢ ಶಾಲಾ ಪರೀಕ್ಷೆಯಲ್ಲಿ ಶೇ. ೮೨ ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಅಸ್ಯ ಬಾನು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಭೆಯಲ್ಲಿ ಶಾಲಾ ಕುಂದುಕೊರತೆ ವಿಷಯವಾಗಿ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಪೀಠೋಪಕರಣಗಳ ಅವಶ್ಯಕತೆ, ಶಾಲಾ ಆವರಣ ಗೋಡೆ ನಿರ್ಮಾಣದ ಬಗ್ಗೆ ಬೇಡಿಕೆಯಾಗಿ ಶಾಲಾಭಿವೃದ್ಧಿ ಸಮಿತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಬೆಳಪು ಗ್ರಾ. ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷೆ ಶೋಭಾ ಭಟ್, ಗ್ರಾ. ಪಂ. ಸದಸ್ಯರಾದ ಪೈಗಂ ಬಾನು, ಕರುಣಾಕರ ಶೆಟ್ಟಿ, ದಿನೇಶ್, ಶರತ್ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರು ಹಾಗೂ ಶಾಲಾ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು.

Related posts

Leave a Reply