Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಬೆಳುವಾಯಿ-ಪಡುಮಾರ್ನಾಡು ಪಂಚಾಯತ್ ವ್ಯಾಪ್ತಿಯ ಗ್ರಾಮಸಭೆ

ಮೂಡುಬಿದಿರೆಯ ಪಡುಮಾರ್ನಾಡು ಗ್ರಾಮಪಂಚಾಯತ್ ಸಭಾ ಭವನದಲ್ಲಿ ಪಡುಮಾರ್ನಾಡು ಪಂಚಾಯತ್‌ನ ಅಧ್ಯಕ್ಷ ಶ್ರೀನಾಥ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ದ್ವಿತೀಯ ಸುತ್ತಿನ ಗ್ರಾಮಸಭೆಯು ಸೋಮವಾರ ನಡೆಯಿತು.

ಬೆಳುವಾಯಿ ಮತ್ತು ಪಡುಮಾರ್ನಾಡು ಗ್ರಾ.ಪಂಚಾಯತ್‌ಗೆ ಒಳಪಟ್ಟಿರುವ ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 35 ಜನ ಟಿ.ಬಿ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ 15 ಜನ ರೋಗಿಗಳು ಗುಣಮುಖರಾಗಿದ್ದು 20 ಜನರಿಗೆ ಚಿಕಿತ್ಸೆ ನಡೆಯುತ್ತಿದೆ. ಟಿ.ಬಿ ರೋಗದ ಲಕ್ಷಣ ಇರುವವರು ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಮತ್ತು ಕ್ರಮ ಪ್ರಕಾರವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕೆಂದು ವೈಧಾಧಿಕಾರಿ ಡಯಾನ ಸಲಹೆ ನೀಡಿದರು.

“ಪಶುಭಾಗ್ಯ” ಯೋಜನೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದ ಹಿಂದೆಯೇ ಅರ್ಜಿಯನ್ನು ಸಲ್ಲಿಸಲಾಗಿದೆ ಆದರೆ ಈವರೆಗೂ ಇಲಾಖೆಯು ಸ್ಪಂದಿಸಿಲ್ಲ ಇದೀಗ ಮತ್ತೊಮ್ಮೆ ಅರ್ಜಿ ನೀಡುವಂತೆ ಹೇಳುತ್ತಿದ್ದೀರಿ ಎಂದು ಗ್ರಾಮಸ್ಥ ದಯಾನಂದ ಹೆಗ್ಡೆ ಆರೋಪಿಸಿದರು. ಇದಕ್ಕೆ ಪಶು ವೈದ್ಯಾಧಿಕಾರಿ ರವಿಕುಮಾರ್ ಅವರು ಉತ್ತರಿಸಿ “ತಮ್ಮ ಅರ್ಜಿಗಳು ನಮ್ಮ ಕೈಸೇರಿದ್ದು ಆಯ್ಕೆ ಸಮಿತಿಯು ಇದನ್ನು ಆಯ್ಕೆ ಮಾಡಿ ಮಾಹಿತಿ ನೀಡುತ್ತದೆ” ಎಂದು ತಿಳಿಸಿದ ಅವರು ಇನ್ನೂ ಯಾರಾದರೂ ಅರ್ಜಿ ನೀಡುವವರಿದ್ದರೆ ನೀಡುವಂತೆ ತಿಳಿಸಿದರು.

ಪಂಚಾಯತ್ ಪರಿಸರದಲ್ಲಿಯೇ ಪ್ಲಾಸ್ಟಿಕ್ ಮತ್ತು ಕಸಗಳನ್ನು ತಂದು ಸುರಿಯುತ್ತಿದ್ದಾರೆ ಇದನ್ನು ದನಗಳು ತಿನ್ನುವುದರಿಂದ ಪ್ರಾಣ ಕಳೆದುಕೊಳ್ಳುತ್ತಿವೆ ಎಂದು ಮಕ್ಕಳಿಗೆ ಬಳಸಿದ ಪ್ಯಾಡ್ ತಿಂದ ಪರಿಣಾಮವಾಗಿ ತ್ಯಾಜ್ಯ ಗಂಟಲಿನಲ್ಲೇ ಸಿಕ್ಕಿಕೊಂಡು ಇತ್ತೀಚೆಗೆ ಪ್ರಾಣ ಕಳೆದುಕೊಂಡ ಹಸುವಿನ ವಾರೀಸುದಾರರಾದ ಸುಶೀಲ ಅವರು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಎಸ್.ಸುವರ್ಣ ಅವರು ಮಾತನಾಡಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ನಲ್ಲಿ ತ್ಯಾಜ್ಯಗಳನ್ನು ತುಂಬಿಸಿ ತಂದು ಪಂಚಾಯತ್ ವ್ಯಾಪ್ತಿಯಲ್ಲಿ ಸುರಿಯುತ್ತಿದ್ದಾರೆ. ಆದರೆ ಯಾರೆಂದು ಗೊತ್ತಾಗುತ್ತಿಲ್ಲ. ಇದು ಪಂಚಾಯತ್ ವ್ಯಾಪ್ತಿಯ ಜನರು ತಂದು ಹಾಕುವುದಲ್ಲ ಎಂದು ಹೇಳಿದ ಅವರು ಯಾರಾದರೂ ವಾಹನದಲ್ಲಿ ತಂದು ತ್ಯಾಜ್ಯವನ್ನು ಹಾಕುವುದು ತಮ್ಮ ಗಮನಕ್ಕೆ ತಂದರೆ ಪಂಚಾಯತ್‌ಗೆ ಫೋನ್ ಮೂಲಕ ಅಥವಾ ವಾಹನದ ನಂಬರನ್ನು ನೋಟ್ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದರು.

2016 ರಲ್ಲಿ ತಾನು ಗುಡಿಸಲು ಕಟ್ಟಿ ಕುಳಿತಾಗ ಅದನ್ನು ತಹಶೀಲ್ದಾರರು ತೆಗೆದು ಹಾಕಿದ್ದಾರೆ. ಆದರೆ ನಂತರದ ದಿನಗಳಲ್ಲಿ ಬೇರೆಯವರು ಮನೆ ಕಟ್ಟಿ ಕುಳಿತುಕೊಂಡು ೯೪ಸಿ ಗೆ ಸೇರ್ಪಡೆಗೊಳಿಸಿದ್ದಾರೆ ಎಂದು ಗ್ರಾಮಸ್ಥರೋರ್ವರು ಆರೋಪಿಸಿದರು. ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದಕಕೆ ಮನೆಯನ್ನು ತೆಗೆಯಲಾಗಿದೆ. ಡಿಸಿ ಮನ್ನಾ ಜಾಗವಿದ್ರೆ ಸೈಟ್‌ಗೆ ಕೊಡಲು ಸಾಧ್ಯವಾಗುತ್ತದೆ. ಇಂತಹ ಜಾಗವಾದ ಮೇಲೆ ನೀಡಲು ಸಹಾಯವಾಗುತ್ತದೆ ಈ ಬಗ್ಗೆ ಅರ್ಜಿ ನೀಡುವಂತೆ ಗ್ರಾಮಕರಣಿಕ ಸಂತೋಷ್ ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶ್ರೀಕಾಂತ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಜಿ.ಪಂ ಸದಸ್ಯೆ ಸುಜಾತ, ಪಂಚಾಯತ್ ಉಪಾಧ್ಯಕ್ಷೆ ಅರುಣಾ ಹೆಗ್ಡೆ, ಸದಸ್ಯರಾದ ರಮೇಶ್ ಶೆಟ್ಟಿ, ದಯಾನಂದ ಪೈ, ಅಭಿನಂದನ್ ಬಲ್ಲಾಳ್, ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಿಡಿ‌ಓ ಬಿ.ರವಿ ಉಪಸ್ಥಿತರಿದ್ದರು. ದ್ವಿ.ದ ಲೆಕ್ಕ ಸಹಾಯಕಗೋಪಾಲ ಭಿಸ್ಟೆ, ಸಿಬಂದಿಳಾದ ಪ್ರಕಾಶ್ ವಾರ್ಷಿಕ ವರದಿ ವಾಚಿಸಿದರು. ರಾಜು ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply