Header Ads
Header Ads
Breaking News

ಬೆಳುವಾಯಿ ಸಿ.ಎ.ಬ್ಯಾಂಕಿನಲ್ಲಿ ಜಿಲ್ಲಾ ಸಹಕಾರಿ ಸಪ್ತಾಹ ದಿನಾಚರಣೆ

ಮೂಡುಬಿದಿರೆ: ದ.ಕ ಜಿಲ್ಲಾ ಮಟ್ಟದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಣೆಯಲ್ಲಿ 6ನೇ ದಿನದ ಸಹಕಾರ ಸಂಭ್ರಮ ಕಾರ್ಯಕ್ರಮ ನ19ರಂದು ಬೆಳಿಗ್ಗೆ 10.30ಕ್ಕೆ ಕೆಸರ್‌ಗದ್ದೆ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಶಾಖೆಯ ಸಭಾಭವನದಲ್ಲಿ ನಡೆಯಲಿದೆ . ಇದೇ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರ ತುರ್ತು ಅಗತ್ಯಗಳಿಗೆ, ಸ್ವಚ್ಛತಾ ಕಾರ್ಯಗಳಿಗಾಗಿ ಮತ್ತು ರಸಗೊಬ್ಬರ ಸಾಗಾಟಕ್ಕೆ ನೂತನ ’ಸಹಕಾರಿ’ ವಾಹನ ಸೌಲಭ್ಯ ಉದ್ಘಾಟನೆ, ಹಿರಿಯ ಸಹಕಾರಿಗಳಿಗೆ, ಸ್ವಸಹಾಯ ಗುಂಪು, ತಾಲೂಕು ಮಟ್ಟದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್ ಹೇಳಿದ್ದಾರೆ. ಅವರು ಬ್ಯಾಂಕಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.ಬೆಳುವಾಯಿ ಸಿ.ಎ.ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಎಸ್.ಪಿ ಉಪಸ್ಥಿತರಿದ್ದರು.

Related posts

Leave a Reply