Header Ads
Breaking News

ಬೆಳ್ತಂಗಡಿಯಲ್ಲಿ ಐಟಿಐ ಉಪನ್ಯಾಸಕನ ಬರ್ಬರ ಹತ್ಯೆ: ಮಾರಕಾಯುಧಗಳಿಂದ ಕೊಚ್ಚಿ ಕೊಲೆ

ಬೆಳ್ತಂಗಡಿ: ಸರಕಾರಿ ಐಟಿಐ ಉಪನ್ಯಾಸಕರೊಬ್ಬರನ್ನು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಮುಂಡೂರು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಮೃತರನ್ನು ಮಾಲಾಡಿ ಸರಕಾರಿ ಐಟಿಐ ಉಪನ್ಯಾಸಕ ವಿಕ್ರಂ(41) ಎಂದು ಗುರುತಿಸಲಾಗಿದೆ. ಮನೆ ಕಡೆಗೆ ಹೋಗುವ ರಸ್ತೆ ಮಧ್ಯೆ ಕೊಲೆಯಾದ ಸ್ಥಿತಿಯಲ್ಲಿ ವಿಕ್ರಂ ಅವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಹೆಣದ ಸಮೀಪವೇ ವಿಕ್ರಂ ಅವರ ಕಾರು ಪತ್ತೆಯಾಗಿದ್ದು, ಅದರಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕಾಗಮಿಸಿರುವ ಬೆಳ್ತಂಗಡಿ ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *