Header Ads
Breaking News

ಬೆಳ್ತಂಗಡಿಯಲ್ಲಿ ಐಟಿಐ ಉಪನ್ಯಾಸಕನ ಕೊಲೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿಯ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಐಟಿಐ ಉಪನ್ಯಾಸಕ ವಿಕ್ರಮ್ ಜೈನ್ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ನಾಗೇಶ್ ಪೂಜಾರಿ (32) ಹಾಗೂ ಡೀಕಯ್ಯ ನಲ್ಕೆ (39) ಬಂಧಿತ ಆರೋಪಿಗಳು. ರೈಲಿನಲ್ಲಿ ಮುಂಬೈಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಕೊಲೆಗೆ ನಿಖರ ಕಾರಣಗಳು ಏನು ಎನ್ನುವುದು ಇನ್ನಷ್ಟೇ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Related posts

Leave a Reply

Your email address will not be published. Required fields are marked *