
ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳಿಂದ ಬೆಳ್ತಂಗಡಿಯಲ್ಲಿ ಗೋಹತ್ಯೆ ಹಾಗೂ ಲವ್ ಜಿಹಾದ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ನ್ಯಾಯವಾದಿಗಳಾದ ಸುಬ್ರಮಣ್ಯ ಕುಮಾರ್ ಅಗರ್ಥ ಮಾತನಾಡಿ, ಸಹಸ್ರಾರು ವರ್ಷಗಳಿಂದ ಈ ದೇಶ ಸನಾತನ ಸಂಸ್ಕೃತಿ ಹಾಗೂ ಹಿಂದೂಗಳು ಪೂಜಿಸುವ ಗೋಮಾತೆ ಮತ್ತು ಮಾತೆಯ ಮೇಲೆ ಆಗುತ್ತಿರುವ ಅನಾಚಾರ ಅತ್ಯಾಚಾರ ಮತಾಂತರಗಳನ್ನು ತಡೆಯುವಂತ ಕೆಲಸ ಹಿಂದೂ ಧರ್ಮದ ಕರ್ತವ್ಯವಾಗಿದೆ ಎಂದರು.