Header Ads
Header Ads
Breaking News

ಬೆಳ್ತಂಗಡಿಯ ಲಾಯ್ಲದಲ್ಲಿ ಮನೆ ಮೇಲೆ ಬಿದ್ದ ಮರ .ಅಪಾಯದಿಂದ ಪಾರಾದ ಮನೆಯಲ್ಲಿದ್ದ ಜನರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಅನಾಹುತಗಳನ್ನ ಸೃಷ್ಟಿಸಿದೆ.ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಗುರಿಂಗಾಣ ಎಂಬಲ್ಲಿ ರಸ್ತೆ ಬದಿಯ ಹಲಸಿನ ಮರ ಮನೆವೊಂದರ ಮೇಲೆ ಬಿದ್ದಿದೆ.

ಹೀಗಾಗಿ ಕಡುಬಡವರಾದ ರಮೇಶ್ ಎಂಬುವವರ ಮನೆಗೆ ಭಾಗಶಃ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮರ ಬೀಳುವ ವೇಳೆ ರಮೇಶ್, ಇವರ ಪತ್ನಿ ಹಾಗೂ ೫ ವರ್ಷದ ಮಗು ಮನೆಯೊಳಗಡೆ ಇದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಮರ ಮನೆ ಬಿದ್ದಿದ್ದರಿಂದ ಕಡುಬಡವರಾದ ರಮೇಶ್ ಕುಟುಂಬಕ್ಕೆ ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ.

Related posts

Leave a Reply