Header Ads
Header Ads
Breaking News

ಬೆಳ್ತಂಗಡಿ ತಾಲೂಕಿನಲ್ಲಿ ನೆರೆ ಬಂದು ಹಾನಿಯಾದ ಹಿನ್ನೆಲೆ : ಮಾನವೀಯತೆ ಮೆರೆದ ಧರ್ಮಸ್ಥಳ ಠಾಣೆಯ ಪೊಲೀಸರು

ಬೆಳ್ತಂಗಡಿ ತಾಲೂಕಿನಲ್ಲಿ ನೆರೆ ಬಂದ ಹಿನ್ನಲೆಯಲ್ಲಿ ಧರ್ಮಸ್ಥಳ ಠಾಣೆಯ ಪೊಲೀಸರು ಕೂಡ ಮಾನವೀಯತೆ ಮೆರೆದ ಘಟನೆ ನಡೆದಿದೆ. ಪೋಲೀಸರ ಮೇಲೆ ಬರುವ ಎಲ್ಲಾ ಆಪಾದನೆಯ ಹೊರತಾಗಿಯೂ ನಾವು ಕೂಡ ಸಮಾಜ ಸೇವೆಗೆ ಕಟಿಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ತಾವು ದುಡಿದ ಒಂದಷ್ಟು ಹಣದಲ್ಲಿ ಮೊನ್ನೆ ಬಂದ ನೆರೆಗೆ ತುತ್ತಾಗಿದ್ದ ಸಂತ್ರಸ್ಥರಾದ ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿವಾಕ್ಷ ಎಂಬವರಿಗೆ ಠಾಣೆಯ ಎಲ್ಲಾ ಸಿಬ್ಬಂದಿಗಳು ಸೇರಿ ಸುಮಾರು ಹದಿನೈದು ಸಾವಿರದಷ್ಟು ಹಣವನ್ನು ನೀಡಿ ಇತರರಿಗೆ ಮಾದರಿಯಾಗಿದ್ದಾರೆ, ಸಂತ್ರಸ್ಥರಾದ ಶಿವಾಕ್ಷರವರು ಮಾತನಾಡಿ ನಮ್ಮ ಸಿಬ್ಬಂದಿಗಳು ಸೇರಿ ಸುಮಾರು ಹದಿನೈದು ಸಾವಿರ ರೂಪಾಯಿಗಳಷ್ಟು ನೀಡಿರುವುದು ಬಹಳ ಸಂತೋಷವಾಗಿದೆ, ನನಗೆ ಮನೆ ಇಲ್ಲದೆ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದೇನೆ. ಏನೂ ಮಾಡಲು ತೋಚದಂತಾಗಿದೆ ಎಂದರು.

Related posts

Leave a Reply

Your email address will not be published. Required fields are marked *