Header Ads
Breaking News

ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳುಗಾರಿಕೆ-ಸಾರ್ವಜನಿಕರಿಂದ ಆಕ್ರೋಶ

ಬೆಳ್ತಂಗಡಿ ತಾಲೂಕಿನಲ್ಲಿ ಅಕ್ರಮ ಮರಳು ಗಾರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮರಳು ದಂಧೆಗೆ ಕಡಿವಾಣ ಇಲ್ಲದಂತೆ ಆಗಿದೆ. ತಾಲೂಕಿನ ಕಲ್ಮಂಜಾ, ಪುದುವೆಟ್ಟು, ನೆರಿಯ ಬೇಳಾಳು ಹಾಗೂ ಇತರ ಕೆಲವು ಕಡೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಪೆÇಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಕ್ಯಾರೇ ಎನ್ನದ ಅವರು ಎಗ್ಗಿಲ್ಲದೆ ಮರಳುಗಾರಿಕೆ ನಡೆಸುತ್ತಿದ್ದಾರೆ.

ಈ ಅಧಿಕಾರಿಗಳು ಹಲವಾರು ಬಾರಿ ಎಚ್ಚರಿಕೆ ಕೊಟ್ಟರೂ ಅದನ್ನು ಲೆಕ್ಕಿಸದೆ ಮರಳು ಗಾರಿಕೆ ನಡೆಸುತ್ತಿದ್ದಾರೆ. ಮರಳನ್ನು ಟಿಪ್ಪರ್ ಹಾಗೂ ಪಿಕಪಲ್ಲಿ ಸಾಗಿಸುವಾಗ ಇದ್ದ ರಸ್ತೆಗಳೆಲ್ಲ ಹಾಳಾಗಿ ಹೋಗಿದೆ. ಮಳೆಗಾಲದ ಸಮಯದಲ್ಲಿ ರಸ್ತೆಯೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *