Header Ads
Header Ads
Breaking News

ಬೆಳ್ತಂಗಡಿಯ ಜಲ ಮರುಪೂರಣ ಅಭಿಯಾನದ ವತಿಯಿಂದ ಜಲಮೂಲಗಳ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ

ಬೆಳ್ತಂಗಡಿಯ ಜಲ ಮರುಪೂರಣ ಅಭಿಯಾನದ ವತಿಯಿಂದ ಜೀವಜಲದ ಮೂಲ ಉಳಿಸುವ ವಿನೂತನ ಕಾರ್ಯಕ್ರಮ ಸಮಗ್ರ ಜಲಮೂಲಗಳ ನಿರ್ವಹಣೆ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಗಾರ ಗುರುವಾಯನಕೆರೆಯ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದ.ಕ ಜಿಲ್ಲಾಧಿಕಾರಿ ಸಿ ಸಸಿಕಾಂತ್ ಸೆಂಥಿಲ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು ಜೀವಜಲದ ಮೂಲ ಉಳಿಸುವ ಕಾರ್ಯಕ್ರಮವನ್ನು ಕೇವಲ ಅಧಿಕಾರಿಗಳು ಮಾತ್ರ ಮಾಡಿದ್ರೆ ಸಾಲದು ಬದಲಾಗಿ ಪ್ರತಿಯೊಬ್ಬ ನಾಗರಿಕನೂ ಇಂತಹ ಕಾರ್ಯಕ್ರಮಗಳಿಗೆ ಸಾಥ್ ನೀಡಿದ್ರೆ ಯಶಸ್ಸು ಖಂಡಿತ ಎಂದು ಹೇಳಿದ್ರು.

ಚಲನಚಿತ್ರ ನಟ ಹಾಗೂ ಸಾಮಾಜಿಕ ಚಿಂತಕ ಜಗ್ಗೇಶ್ ಅಭಿಯಾನಕ್ಕೆ ಚಾಲನೆ ನೀಡಿದ್ರು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾ ವಹಿಸಿದ್ರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ದ.ಕ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಾರದ ಡಾ. ಜೋಸೆಫ್ ಎನ್ ಎಮ್ ಭಾಗವಹಿಸಿದ್ರು. ಈ ಸಂದರ್ಭ ವಿಧಾನ ಪರಿಷತ್ ಶಾಸಕರಾದ ಕೆ ಹರೀಶ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್ ಸೆಲ್ವಮಣಿ, ಬೆಳ್ತಂಗಡಿ ತಾಲೂಕು ಪಂಚಾಯತಿ ಅಧ್ಯಕ್ಷೆ ದಿವ್ಯಜ್ಯೋತಿ, ಡಾ. ಎಲ್ ಹೆಚ್ ಮಂಜುನಾಥ್ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *