Header Ads
Breaking News

‘ಅಧ್ಯಯನಶೀಲತೆಯಿಂದ ಮನರಂಜನಾ ಉದ್ಯಮದಲ್ಲಿ ಯಶಸ್ಸು’

ಅಧ್ಯಯನಶೀಲತೆಯ ಬದ್ಧತೆಯುಳ್ಳವರು ಮನರಂಜನಾ ಉದ್ಯಮದಲ್ಲಿ ವೃತ್ತಿಪರ ಯಶಸ್ಸು ಕಂಡುಕೊಳ್ಳಬಹುದು ಎಂದು ಕಲರ್ಸ್ ಕನ್ನಡ ವಾಹಿನಿಯ ಕ್ರಿಯೇಟಿವ್ ಟ್ರೇನರ್ ಜಯಲಕ್ಷ್ಮಿ ಭಟ್ ಹೇಳಿದರು.ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಮೂಹ ಸಂವಹನ ವಿಭಾಗ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ದೃಶ್ಯಮಾಧ್ಯಮದಲ್ಲಿ ಕಾರ್ಯೋನ್ಮುಖರಾದಾಗ ಹಲವು ಸವಾಲುಗಳಿರುತ್ತವೆ. ಧಾರಾವಾಹಿ, ರಿಯಾಲಿಟಿ ಶೋ ಮತ್ತಿತರ ರಂಜನಾ ಕಾರ್ಯಕ್ರಮಗಳನ್ನು ನೆಚ್ಚಿಕೊಂಡು ಟಿವಿ ವಾಹಿನಿಗಳು ಕಾರ್ಯಕ್ರಮ ರೂಪಿಸುತ್ತವೆ. ಇಂಥ ವಾಹಿನಿಗಳಲ್ಲಿ ಉದ್ಯೋಗಾವಕಾಶ ಪಡೆಯಲು ಪುಸ್ತಕಗಳೊಂದಿಗಿನ ಓದಿನ ನಂಟು ಇರಲೇಬೇಕು ಎಂದು ಹೇಳಿದರು.ಫಿಕ್ಷನ್ ಮತ್ತು ನಾನ್-ಫಿಕ್ಷನ್ ಪ್ರಕಾರದ ಕಾರ್ಯಕ್ರಮಗಳನ್ನು ರೂಪಿಸುವಾಗ ಟಿವಿ ವಾಹಿನಿಗಳ ವೃತ್ತಿಪರರು ಹೊಸ ಹೊಸ ಹೊಳಹುಗಳನ್ನು ಹೊಳೆಸಿಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಓದಿನ ಅನುಭವ ನೆರವಿಗೆ ಬರುತ್ತದೆ. ಸಾಹಿತ್ಯ ಸೇರಿದಂತೆ ಬೇರೆ ಬೇರೆ ಬಗೆಯ ಕೃತಿಗಳನ್ನು ಓದಿದವರು ಹೊಸ ಬಗೆಯ ಕಾರ್ಯಕ್ರಮಗಳಿಗೆ ಬೇಕಾಗುವ ಹೊಸ ಆಲೋಚನೆಗಳನ್ನು ಹೊಳೆಸಿಕೊಳ್ಳುವ ಶಕ್ತಿ ಪಡೆದಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.ಪುಸ್ತಕ ಓದುವುದರಿಂದ ಜ್ಞಾನ ವಿಸ್ತರಿಸಿಕೊಳ್ಳಬಹುದು. ಪುಸ್ತಕಗಳನ್ನು ಓದಿದಷ್ಟೂ ಸೃಜನಶೀಲ ಬರಹ ಬರೆಯುವ ತೂಕ ಹೆಚ್ಚಾಗುತ್ತದೆ. ಓದಿನ ಬೆಂಬಲವಿಲ್ಲದಿದ್ದರೆ ಹೊಸದನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯಾವುದೇ ವೃತ್ತಿಗೆ ಸೇರಿದಾಗ ಅಲ್ಲಿ ನಮ್ಮನ್ನು ನಾವು  ಮಟ್ಟಿಗೆ ತೊಡಗಿಸಿಕೊಳ್ಳುತ್ತೇವೋ ಎಂಬುದರ ಮೇಲೆ ನಮ್ಮ ಯಶಸ್ಸು ನಿರ್ಧಾರವಾಗುತ್ತದೆ. ಹಾಗೆಯೇ ಟಿವಿ ಮಾಧ್ಯಮದಲ್ಲಿ ಸೃಜನಶೀಲತೆ ಮತ್ತು ಕಾರ್ಯಕ್ಷಮತೆ ಅತೀ ಮಹತ್ವದ ಸ್ಥಾನ ಪಡೆಯುತ್ತದೆ. ಮಸ್ತಕದಲ್ಲಿನ ಯೋಚನೆಗಳನ್ನು ಲೇಖನಿಗೆ ತರುವ ಕಾರ್ಯ ಈ ರಂಗದಲ್ಲಿ ನಡೆಯಬೇಕು ಎಂದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ್ ಹೆಗ್ಡೆ ಉಪಸ್ಥಿತರಿದ್ದರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಶ್ರುತಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ತ್ರಿಪುರಾ ವಂದಿಸಿದರು.

Related posts

Leave a Reply

Your email address will not be published. Required fields are marked *