Header Ads
Header Ads
Breaking News

ಬೆಳ್ಮಣ್‌ನಲ್ಲಿ ಟೋಲ್‌ಗೇಟ್ ನಿರ್ಮಾಣ ರದ್ದುಗೊಳಿಸಿ: ಗೋಪಾಲ ಭಂಡಾರಿ ಆಗ್ರಹ

ಕಾರ್ಕಳ-ಪಡುಬಿದ್ರಿ ರಸ್ತೆಯ ಬೆಳ್ಮಣ್‌ನಲ್ಲಿ ನಿರ್ಮಿಸಲು ಮುಂದಾಗಿರುವ ಟೋಲ್ ರದ್ದುಪಡಿಸಬೇಕು. ಆದರಲ್ಲಿ ಯಾವುದೇ ರಾಜಕೀಯ ಬೆರೆಸುವ ಸಣ್ಣತನ ಬೇಡ. ಜತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ವ್ಯವಸ್ಥೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ರದ್ದುಪಡಿಸಬೇಕು ಎಂದು ಕಾರ್ಕಳ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರು  ಸುದ್ದಿಗೋಷ್ಠಿ ನಡೆಸಿ ಆಗ್ರಹಿಸಿದ್ದಾರೆ.

ಬೆಳ್ಮಣ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಕೂಡ ಕೈಜೋಡಿಸಿದೆ. ಬೆಳ್ಮಣ್ ಟೋಲ್ ರದ್ದುಪಡಿಸಲು ಈಗಾಗಲೇ ಲೋಕೋಪಯೋಗಿ ಸಚಿವರನ್ನೂ ಐವನ್ ಡಿಸೋಜಾ ಅವರ ಜತೆಗೆ ಭೇಟಿ ಮಾಡಿ ವಿನಂತಿ ಮಾಡಿಕೊಂಡಿದ್ದೇನೆ. ಮಂಗಳೂರು ತೆರಳಬೇಕಾದರೆ ಎರಡು ಕಡೆಯಲ್ಲಿ ಟೋಲ್ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಟೋಲ್ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸರಕಾಗಳು ಟೋಲ್ ವ್ಯವಸ್ಥೆ ರದ್ದುಪಡಿಸಿ, ಸಾಲ ಸಲ್ಲಿಸಲು ಬೇರೇನಾದರೂ ಸಂಪನ್ಮೂಲ ಹುಡುಕಬೇಕು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಜಾರ್ಜ್ ಕ್ಯಾಸ್ತೆಲಿನ್, ಬಿಪಿನ್ ಚಂದ್ರಪಾಲ್, ವಸಂತ ಬಂಗೇರ ಉಪಸ್ಥಿತರಿದ್ದರು.
ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply