Header Ads
Header Ads
Breaking News

ಬೆಳ್ಮಣ್ ಟೋಲ್‌ಗೇಟ್ ಬಿಜೆಪಿಯ ಕೊಡುಗೆ: ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ ಆರೋಪ

ಕಾರ್ಕಳ: ಬೆಳ್ಮಣ್ಣಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜ್ಯ ಹೆದ್ದಾರಿ ಟೋಲ್ ನಿರ್ಮಾಣ ಬಿಜೆಪಿಯ ಕೊಡುಗೆಯಾಗಿದೆ. ಅಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಒಟ್ಟು 19ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಈ ರಸ್ತೆಗಳ ಪೈಕಿ ಪಡುಬಿದ್ರೆ ಕಾರ್ಕಳ ರಾಜ್ಯ ಹೆದ್ದಾರಿಯೂ ಒಳಗೊಂಡಿದೆ. ಅಂದಿನ ಲೋಕೋಪಯೋಗಿ ಸಚಿವರ ಸಿ.ಎಂ ಉದ್ಘಾಟಿಸಿ ಕಾಮಗಾರಿಗೆ ಚಾಲನೆ ನೀಡಿದ್ದು, ಕಾಮಗಾರಿ ಆರಂಭಕ್ಕೂ ಮುನ್ನವೇ ಟೋಲ್ ಸಂಗ್ರಹಕ್ಕೆ ಬಿಜೆಪಿ ಸರಕಾರ ಒಡಂಬಡಿಕೆ ಮಾಡಿತ್ತು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನೇಮಿರಾಜ ರೈ ಆರೋಪಿಸಿದ್ದಾರೆ.

ಅವರು ಸೋಮವಾರ ಕಾರ್ಕಳದ ಹೊಟೇಲ್ ಪ್ರಕಾಶ್‌ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿ, ರಾಜ್ಯದ 19 ರಾಜ್ಯ ಹೆದ್ದಾರಿಗಳ ನಿರ್ಮಾಣಕ್ಕೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ)ನಿಂದ ಶೇ ೬ರ ಬಡ್ಡಿದರದಲ್ಲಿ ಸಾಲ ಪಡೆಯಲಾಗಿತ್ತು, ಈ ಪೈಕಿ ಪಡುಬಿದ್ರೆ ಕಾರ್ಕಳ ಹೆದ್ದಾರಿಗೆ61 ಕೋ.ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿಯ ಶಿಲಾನ್ಯಾಸವನ್ನು ಅಂದಿನ ಲೋಕೋಪಯೋಗಿ ಸಿ.ಎಂ ಉದ್ಘಾಟಿಸಿ ನೆರವೇರಿಸಿದ್ದು ಉಸ್ತುವಾರಿ ಸಚಿವ ವಿ.ಎಸ್ ಆಚಾರ್ಯ, ಕಾರ್ಕಳ ಶಾಸಕ ಗೋಪಾಲ ಭಂಡಾರಿ ಹಾಜರಿದ್ದರು. ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕಾರ್ಕಳದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳು ತನ್ನದೆಂದು ಬೆನ್ನುತಪಟ್ಟಿಕೊಳ್ಳುತ್ತಿದ್ದ ಅಂದಿನ ಮಾಜಿ ಪ್ರಸ್ತುತ ಹಾಲಿ ಶಾಸಕ ಸುನಿಲ್ ಕುಮಾರ್‌ಗೆ ಟೋಲ್ ಒಡಂಬಡಿಕೆ ಗಮನಕ್ಕೆ ಬಾರದೇ ಹೋಗಿರುವುದು ವಿಪರ್ಯಾಸವೆಂದು ವ್ಯಂಗ್ಯವಾಡಿದರು.

Related posts

Leave a Reply