Header Ads
Header Ads
Breaking News

ಬೆಳ್ಳಾಯರು ಕೆರೆಕಾಡಿನ ಜಲಕೆರೆಗೆ ೧ ಕೋಟಿ ಅನುದಾನ ಮೂಡಾದ ಅಧ್ಯಕ್ಷ ಸುರೇಶ್ ಬಲ್ಲಾಖ್ ಹೇಳಿಕೆ

ಮೂಡಾದಿಂದ ಪಡಪಣಂಬೂರು ಗ್ರಾಮ ಪಂಚಾಯತ್ ನ ಬೆಳ್ಳಾಯರು ಗ್ರಾಮದ ಕೆರೆಕಾಡಿನ ಜಲಕದ ಕೆರೆಗೆ ೧ ಕೋಟಿ ಅನುದಾನ ನೀಡಲಾಗುವುದೆಂದು ಮೂಡಾದ ಅಧ್ಯಕ್ಷ ಸುರೇಶ್ ಬಲ್ಲಾಳ್ ಹೇಳಿದರು. ಪಡಪಣಂಬೂರು ಗ್ರಾಮ ಪಂಚಾಯತ್ ನ ಬೆಳ್ಳಾಯರು ಗ್ರಾಮದ ಕೆರೆಕಾಡು ಬಳಿಯಿರುವ ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಳದ ಜಲಕದ ಕೆರೆಯ ಅಭಿವೃದ್ದಿ ಬಗ್ಗೆ ಪರಿಶೀಲನೆ ನಡೆಸಲು ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಶಾಸಕ ಕೆ ಅಭಯಚಂದ್ರ ಜ್ಯೆನ್ ರವರು ಇಲ್ಲಿನ ಕೆರೆಯ ಅಭಿವೃದ್ದಿ ಬಗ್ಗೆ ಅನುದಾನ ಮೀಸಲಿಡಲು ತಿಳಿಸಿದ್ದು ಅದರಂತೆ ಮೀಸಲಿರಿಸಲಾಗಿದೆ ನೀರಿನ ಒರತೆಯಿದ್ದು ವಿಸ್ತಾರವಾದ ಜಾಗವನ್ನು ಹೊಂದಿರುವ ಇಲ್ಲಿನ ಕೆರೆಯನ್ನು ವಿಶಾಲ ಗೊಳಿಸಿ ಪಾಕ್ ವ್ಯವಸ್ತೆ, ಕೆರೆಯ ಸುತ್ತ ವಾಕಿಂಗ್ ವ್ಯವಸ್ತೆ ಸೇರಿದಂತೆ ೧ ಕೋಟಿ ಅನುದಾನವನ್ನು ಮುಂದಿನ ಮೂಡ ಸಭೆಯಲ್ಲಿ ಚರ್ಚಿಸಿ ಮೀಸಲಿರಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಮೂಡಾದ ಸದಸ್ಯ ವಸಂತ ಬೆರ್ನಾಡ್, ಪಡು ಪಣಂಬೂರು ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್, ಉಪಾಧ್ಯಕ್ಷೆ ಸುರೇಖ, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಇಂಜಿನೀಯರ್ ಮೋಹನ್ ಕುಮಾರ್ ಮತ್ತಿತರರು ಇದ್ದರು.

ವರದಿ: ನಿಶಾಂತ್ ಮುಲ್ಕಿ

Related posts

Leave a Reply