Header Ads
Header Ads
Breaking News

ಬೆಳ್ಳಾರೆ : ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ

ಸಂಪಾಜೆ ಪರಿಸರದಲ್ಲಿ ಗುರುವಾರ ರಾತ್ರಿ ಕಾಡಾನೆಗಳು ಕೃಷಿಕರ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆಗಳನ್ನು ನಾಶ ಪಡಿಸಿದ ಕುರಿತು ವರದಿಯಾಗಿದೆ.

ಸಂಪಾಜೆ ಗ್ರಾಮದ ಕುಯಿಂತೋಡು ಜಗದೀಶ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ತೆಂಗಿನ ಮರಗಳನ್ನು ಮುರಿದು ಹಾಕಿ ಹಾಗೂ ಇತರ ಬೆಳೆಗಳನ್ನು ನಾಶಪಡಿದಿದೆ. ವೆಂಕಪ್ಪ, ದೇವಿ ಪ್ರಸಾದ್ ಅವರ ತೋಡಗಳಿಗೆ ಕಾಡಾನೆಗಳು ನುಗ್ಗಿ ತೆಂಗು, ಬಾಳೆ, ಅಡಿಕೆ ಮರಗಳನ್ನು ನಾಶಪಡಿಸಿದೆ. ಅರೆಕಲ್ಲು, ಕುಂಟಿಕಾನ, ಕೊಡಂಕೇರಿ ಇತರ ಭಾಗದಲ್ಲಿಯೂ ಕಾಡಾನೆಗಳು ನುಗ್ಗಿ ತೋಟಗಳಿಗೆ ಹಾನಿ ಮಾಡಿವೆ. ಸಂಪಾಜೆ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿ ಇಡುತ್ತಿದ್ದು ಅಪಾರ ಪ್ರಮಾಣದಲ್ಲಿ ರೈತರು ನಷ್ಟಕ್ಕೆ ಒಳಗಾಗಿದ್ದರೆ.

Related posts

Leave a Reply