Header Ads
Header Ads
Breaking News

ಬೆಳ್ಳಾರೆ ಸಮೀಪ ಬಸ್-ಬೈಕ್ ಢಿಕ್ಕಿ, ಸಹಸವಾರ ದುರ್ಮರಣ

ಬೆಳ್ಳಾರೆ : ಗಾರೆ ಕೆಲಸ ಮಗಿಸಿ ತಮ್ಮ ಮನಗೆ ಹಿಂತಿರುಗುತ್ತಿದ್ದ ಸಂದರ್ಭ ಬಸ್ಸ್ ಡಿಕ್ಕಿ ಹೊಡೆದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನೊರ್ವ ಮೃತ ಘಟನೆ ಶುಕ್ರವಾರ ರಾತ್ರಿ ಬೆಳ್ಳಾರೆ ಸಮೀಪದ ಗೌರಿ ಹೊಳೆ ಬಳಿ ನಡೆದಿದೆ.ಪಂಬೆತ್ತಾಡಿ ಗ್ರಾಮದ ಸೋಮನಾಥ ಮತ್ತು ಕಲ್ಮಡ್ಕ ಗ್ರಾಮದ ಪದ್ಮಯ್ಯ ಎಂಬವರು ಗಾರೆ ಕೆಲಸ ಮಾಡುವರಾಗಿದ್ದು, ಶುಕ್ರವಾರ ಪೆರುವಾಜೆಯ ಮನೆಯೊಂದರಲ್ಲಿ ಗಾರೆ ಕೆಲಸ ಮಗಿಸಿ ತಮ್ಮ ಮನೆಗೆ ಪದ್ಯಯ್ಯ ಬೈಕ್‌ನಲ್ಲಿ ಹಿಂದಿರುಗುತ್ತಿದ್ದರು.

ಆಗ ಬಾಳಿಲ ಕಡೆಯಿಂದ ಬೆಳ್ಳಾರೆ ಕಡೆ ಸರಕಾರಿ ಬಸ್ಸು ಬರುತ್ತಿದ್ದ ಸಂದರ್ಭ ರಸ್ತೆಯ ಗುಂಡಿ ತಪ್ಪಿಸಲು ಪದ್ಮಯ್ಯರು ಯತ್ನಿಸಿದ್ದಾಗ ಬಸ್ಸು ಬಂದು ಬೈಕ್‌ಗೆ ಡಿಕ್ಕಿ ಹೊಡೆಯಿತು. ಸೋಮನಾಥರು ರಸ್ತೆಗೆ ಎಸೆಯಯಲ್ಪಟ್ಟು ಗಂಭೀರ ಗಾಯವಾಯಿತು. ಅವರನ್ನು ಸುಳ್ಯದ ಮೆಡಿಕಲ್ ಕಾಲೇಜಿಗೆ ಕೊಂಡು ಹೋಗಿ ಚಿಕಿತ್ಸೆ ಕೊಡಿಸದರು ಫಲಕಾರಿಯಾಗದೆ ಕೊನೆಯುಸಿರೆಳೆದರು. ಪದ್ಯಯ್ಯರಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Related posts

Leave a Reply