Header Ads
Breaking News

ಬೆಳ್ಳಿಪ್ಪಾಡಿ `ವನಶಾಸ್ತಾರ-ನಾಗಸನ್ನಧಿ’ ಪುನರ್‍ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪುತ್ತೂರು; ಸುಮಾರು 1600 ವರ್ಷಗಳ ಹಿಂದಿನ ಇತಿಹಾಸವಿರುವ ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಜತ್ತಿಬೆಟ್ಟು ವನಶಾಸ್ತಾರ ಹಾಗೂ ನಾಗಸನ್ನಧಿ ದೇವಳದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 1ರಿಂದ 4 ತನಕ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಸ್ವಾಗತ ಸಮಿತಿ ಸಂಚಾಲಕ ರಾಮಣ್ಣ ಗೌಡ ಗುಂಡೋಲೆ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪ್ರಕೃತಿಯ ತಾಣದಲ್ಲಿ ಬಂಡೆಗಳ ನಡುವೆ ಮೂರು ಕಡೆಯಿಂದಲೂ ಜಲಾಧಾರೆ ಹರಿಯುತ್ತಿರುವ ಮಳುವೇಲು ಜತ್ತಿಬೆಟ್ಟು ಎಂಬ ಜಾಗದಲ್ಲಿ ಈ ಪುರಾತನ ದೇವ ಸಾನಿಧ್ಯವಿದ್ದು, ಇದನ್ನು ಪುನರ್ ಪ್ರತಿಷ್ಠೆ ನಡೆಸುವ ಕೆಲಸ ನಡೆಯುತ್ತಿದೆ. 22 ತಲೆ ಮಾರುಗಳ ಹಿಂದೆ ನಿರ್ಮಾಣಗೊಂಡು ಶಿಥಿಲಾವಸ್ಥೆಯಲ್ಲಿದ್ದ ವನಶಾಸ್ತಾರ-ನಾಗಸನ್ನಧಿಯನ್ನು ಪ್ರಶ್ನಾ ಚಿಂತನೆಯ ಮೂಲಕ ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದೆ. ಮಾರ್ಚ್ 1ರಂದು ಬೆಳಿಗ್ಗೆ 10.30ಕ್ಕೆ ಹೊರೆಕಾಣಿಕೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದಿಂದ ಸಂಜೆ 7 ತನಕ ಮಹಾಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 2 ರಂದು ಮಹಾ ಗಣಪತಿ ಹೋಮ ಸಹಿತ ವೈಧಿಕ ಕಾರ್ಯಕ್ರಮ ಜರಗಲಿದೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 7 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ವಹಿಸಲಿದ್ದಾರೆ. ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಅವರು ಧಾರ್ಮಿಕ ಉಪನ್ಯಾಸ ನೀಡಲಿರುವರು. ಶಾಸಕ ಸಂಜೀವ ಮಠಂದೂರು, ಜಿಪಂ ಸದಸ್ಯೆ ಶಯನಾ ಜಯಾನಂದ, ತಾಪಂ ಲಕ್ಷ?ಮಣ ಗೌಡ ಬೆಳ್ಳಿಪ್ಪಾಡಿ, ಗ್ರಾಪಂ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಎಪಿಎಂಸಿ ಸದಸ್ಯ ಬೆಳ್ಳಿಪ್ಪಾಡಿ ಕಾರ್ತಿಕ್ ರೈ, ಡಾ. ರಘು ಬೆಳ್ಳಿಪ್ಪಾಡಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾರ್ಚ್ 3 ರಂದು ಧಾರ್ಮಿಕ ಕಾರ್ಯಕ್ರಮ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 4 ರಂದು ಬೆಳಿಗ್ಗೆ 5 ಗಂಟೆಯಿಂದ ಗಣಪತಿ ಹೋಮ, ಆಶ್ಲೇಷ ಬಲಿ ವನಶಾಸ್ತಾರ ದೇವರ ಪುನರ್ ಪ್ರತಿಷ್ಠೆ, ನಿದ್ರಾ ಕಲಶ, ಜೀವಕಲಾಭಿಷೇಕ, ಪ್ರತಿಷ್ಟಾ ಪೂಜೆ, ನಾಗ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ನಾಗ ತಂಬಿಲ ನಡೆದು, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.

ಗೋಷ್ಟಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಬಾಲಪ್ಪ ಗೌಡ ಮಳುವೇಲು, ಪ್ರಧಾನ ಕಾರ್ಯದರ್ಶಿ ಚಂದನ್ ಟಿ. ತೆಂಕಪ್ಪಾಡಿ, ಕಾರ್ಯಾಧ್ಯಕ್ಷ ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಹಾಗೂ ದೇವಳದ ಆಡಳಿತ ಮಂಡಳಿಯ ಪದ್ಮನಾಭ ಶೆಟ್ಟಿ ರೆಂಜಾಜೆಗುತ್ತು ಹಾಜರಿದ್ದರು.

Related posts

Leave a Reply

Your email address will not be published. Required fields are marked *