Header Ads
Header Ads
Header Ads
Breaking News

ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿ ಅತ್ತಾವರದ ಕೆ‌ಎಂಸಿ ಆಸ್ಪತ್ರೆ ಬಿಪಿ‌ಎಲ್ ಕುಟುಂಬಗಳಿಗೆ ವಿಶೇಷ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಕೆ‌ಎಂಸಿ ಆಸ್ಪತ್ರೆಯ ಸಂಜೀವಿನಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮ

ಮಂಗಳೂರಿನ ಅತ್ತಾವರದಲ್ಲಿರುವ ಕೆ‌ಎಂಸಿ ಆಸ್ಪತ್ರೆಯು ಬೆಳ್ಳಿ ಮಹೋತ್ಸವವನ್ನು ಆಚರಿಸುವ ಹಿನ್ನೆಲೆಯಲ್ಲಿ ಬಿಪಿ‌ಎಲ್ ಕುಟುಂಬಗಳಿಗೆ ವಿಶೇಷ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಕಾರ್ಯಕ್ರಮ ಆಸ್ಪತ್ರೆಯ ಸಂಜೀವಿನ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಣಿಪಾಲ ವಿಶ್ವ ವಿದ್ಯಾನಿಲಯದ ಪ್ರೊ. ಚಾನ್ಸ್‌ಲರ್ ಡಾ. ಎಚ್.ಎಸ್ ಬಲ್ಲಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅನಂತರ ಬಿಪಿ‌ಎಲ್ ಕುಟುಂಬಗಳಿಗೆ ಸಾಂಕೇತಿಕವಾಗಿ ವಿಶೇಷ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಿದರು. ಇದೇ ವೇಳೆ ಮಾತನಾಡಿದ ಪ್ರೊ. ಚಾನ್ಸ್‌ಲರ್ ಡಾ. ಎಚ್.ಎಸ್ ಬಲ್ಲಾಳ್ ಮಾತನಾಡಿ ಇವತ್ತು ನಾವು 34 ಸಾವಿರ ಬಿಪಿ‌ಎಲ್ ಕುಟುಂಬಗಳಿಗೆ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಿದ್ದೇವೆ. ಆನಾರೋಗ್ಯಕ್ಕೊಳಗಾದವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಈ ಹಿಂದೆ ಆರೋಗ್ಯ ಕಾರ್ಡ್ ವಿತರಿಸಿದ ಕೆಲವು ಮಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೆ‌ಎಂಸಿ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್, ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ವಯ್ಸ್ ಚಾನ್ಸಲರ್ ಡಾ. ವಿ. ಸುರೇಂದ್ರ ಶೆಟ್ಟಿ, ಕೆ‌ಎಂಸಿ ಆಸ್ಪತ್ರೆಯ ಡೀನ್ ಡಾ. ಎಮ್. ವೆಂಕಟ್ರಾಯ ಪ್ರಭು, ಡಾ. ದಿಲೀಪ್, ಕೆ‌ಎಂಸಿ ಆಸ್ಪತ್ರೆಯ ಸಿ‌ಒ‌ಒ ಸಘೀರ್ ಸಿದ್ದಿಕ್ಕಿ ಉಪಸ್ಥಿತರಿದ್ದರು. ಅತ್ತಾವರ ಕೆ‌ಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥರಾದ ರಾಕೇಶ್ ಧನ್ಯವಾದ ಸಮರ್ಪಿಸಿದರು.

ವರದಿ: ಶರತ್

Related posts

Leave a Reply