Header Ads
Header Ads
Header Ads
Breaking News

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಶಾರದಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣ ಯುಕೆಜಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ಪ್ರದರ್ಶನ

ಮಂಗಳೂರಿನಲ್ಲಿರುವ ಶಾರದಾ ವಿದ್ಯಾಲಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಶೈಕ್ಷಣಿಕ, ಸಾಂಸ್ಕೃತಿಕ ಕಲೆ, ಸಾಹಿತ್ಯ ಬಗೆಗೆ ಪ್ರದರ್ಶನ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ ಶಾರದಾ ವಿದ್ಯಾಲಯವು ಇದೀಗ ೨೫ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಧರ್ಮಕೋಲಿನಲ್ಲಿ ಅರಳಿದ ಕದ್ರಿ ದೇವಸ್ಥಾನದ ಪ್ರತಿಕೃತಿ, ತುಳುನಾಡಿನ ಗಂಡುಕಲೆ ಯಕ್ಷಗಾನದ ಉಡುಗೆ ಆಭರಣಗಳ ಸೊಬಗು, ಕಸದಿಂದ ನಿರ್ಮಿಸಿದ ಸುಂದರ ಮಾದರಿಗಳ ಝಲಕ್ ತುಳುನಾಡಿನ ಪರಂಪರೆ ಸಾರುವ ಚೆನ್ನಮಣೆ, ನೊಗ, ತೊಟ್ಟಿಲು, ಏತಗಳ ಸಮಾಗಮ ಕಂಡುಬಂತು. ಈ ಬಗ್ಗೆ ಪ್ರಿನ್ಸಿಪಾಲ್ ಸುನೀತಾ ಮಾಡಾ ಮಾಹಿತಿ ನೀಡಿದ್ದು ಹೀಗೆ

ಶಾರಾದ ವಿದ್ಯಾಲಯದ ಯುಕೆಜಿಯಿಂದ ಪಿಯುಸಿವರೆಗಿನ ಮಕ್ಕಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳು, ಜಿಲ್ಲೆಯ ಸಂಪ್ರದಾಯ, ಸಂಸ್ಕೃತಿ, ಪರಂಪರೆ ಬಿಂಬಿಸುವ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಇನ್ನು ಶಾರದಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ಶೈಕ್ಷಣಿಕ ಪ್ರದರ್ಶನದ ಬಗೆಗೆ ಮಾತನಾಡಿ ದಯಾನಂದ ಅವರು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಮಕ್ಕಳು ತಯಾರಿಸಿದ ವಿವಿಧ ವಿಜ್ಞಾನದ ಮಾದರಿಗಳನ್ನು 60 ಕೊಠಡಿಗಳಲ್ಲಿ ಇಡಲಾಗಿದೆ. ಈಗಾಗಲೇ ವಿವಿಧ ಶಾಲೆಯ ಮಕ್ಕಳು ಬಂದು ಈ ಮಾದರಿಗಳನ್ನು ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಬಳಸಿ ಎಸೆಯಬಹುದಾದ ವಸ್ತುಗಳಾದ ಬೆಂಕಿ ಕಡ್ಡಿ, ಐಸ್‌ಕ್ಯಾಂಡಿಯ ಕೋಲು, ಧರ್ಮಕೋಲುಗಳನ್ನು ಬಳಸಿ ಹಲವು ವಸ್ತುಗಳನ್ನು ತಯಾರಿಸಿದ್ದರೆ, ಸ್ಚಲ್ಪ ದೊಡ್ಡ ಮಕ್ಕಳು ಬ್ಲೂಟೂತ್ ಮೂಲಕ ಕಾರು ಚಾಲನೆ, ಪ್ಯಾಕ್ ಮ್ಯಾನ್ ಎನ್ನುವ ಹೊಸ ಆಟ, ಶಾಲೆಯ ಒಳಗಡೆಯೇ ಪೆರಿಸ್ಕೋಪ್ ಮೂಲಕ ತಾಜ್‌ಮಹಲ್ ವೀಕ್ಷಣೆ ಮಾಡುವ ಅವಕಾಶವನ್ನು ಕಲ್ಪಿಸಲಾಗಿತ್ತು.

ವರದಿ: ಶರತ್

Related posts

Leave a Reply