Header Ads
Header Ads
Header Ads
Breaking News

ಬೇಕಾದ್ರೆ ತೆಗದುಕೊಳ್ಳಲಿ ವಸತಿ ಶಾಲೆಯ ಮಕ್ಕಳೊಂದಿಗೆ ದೀಪಾವಳಿ ಹಬ್ಬ

ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ದೀಪಾವಳಿ ಬಂಟ್ವಾಳದ ಜೆಸಿ‌ಐ ವತಿಯಿಂದ ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ವಸತಿ ಶಾಲೆಯ ಪುಟಾಣಿಗಳು ದೀಪಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಖುಷಿ ಪಟ್ಟರು. ಮಕ್ಕಳ ಸಂಭ್ರಮ ನೆರೆದವರ ಮನಸ್ಸಿನಲ್ಲಿ ದೀಪಾವಳಿಯ ಸಡಗರವನ್ನು ಹಿಮ್ಮಡಿಗೊಳಿಸಿತು.ಈ ವಸತಿ ಶಾಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ದೀಪಾವಳಿ ರಜೆಯ ಹಿನ್ನಲೆಯಲ್ಲಿ ಕೆಲ ವಿದ್ಯಾರ್ಥಿಗಳು ಊರಿಗೆ ತೆರರಳಿದ್ದರೆ ಇನ್ನೂ ಅನೇಕ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿಯೇ ಉಳಿದಿದ್ದು ದೀಪಾವಳಿ ಹಬ್ಬದ ಸಂಭ್ರಮದಿಂದ ವಂಚಿತರಾಗಿದ್ದರು. ಇದನ್ನು ಮನಗಂಡ ಜೇಸಿ‌ಐ ಬಂಟ್ವಾಳದ ಸದಸ್ಯರು ಒಂದು ದಿನದ ದೀಪಾವಳಿ ಹಬ್ಬವನ್ನು ವಸತಿ ಶಾಲೆಯ ಮಕ್ಕಳೊಂದಿಗೆ ಆಚರಿಸಿ ಅವರಿಗೂ ದೀಪಾವಳಿಯ ಸಡಗರ ಹಂಚಿದರು. ಪಟಾಕಿ ಸಿಡಿಸಿ, ಸಿ ತಿಂದು, ಕುಣಿದು ಕುಪ್ಪಳಿಸಿದರು.

Related posts

Leave a Reply