Header Ads
Header Ads
Breaking News

ಬೇಕ್ಸ್ ಆಂಡ್ ಕೇಕ್ಸ್‌ನ ಮತ್ತೊಂದು ಔಟ್‌ಲೆಟ್ :ಉರ್ವಸ್ಟೋರ್‌ನಲ್ಲಿ ಬೇಕ್ಸ್ ಆಂಡ್ ಕೇಕ್ಸ್ ಶುಭಾರಂಭ

ಮಂಗಳೂರಿನಲ್ಲಿ ಜನಪ್ರೀಯತೆ ಪಡೆದುಕೊಂಡಿರುವ ಹಾಗೂ ಟೇಸ್ಟಿಯಾದ ಕೇಕ್ಸ್‌ಗೆ ಹೆಸರುವಾಸಿಯಾದ ಬೇಕ್ಸ್ ಆಂಡ್ ಕೇಕ್ಸ್ ಮಂಗಳೂರಿನ ಉರ್ವಸ್ಟೋರ್‌ನಲ್ಲಿ ಶುಭಾರಂಭಗೊಂಡಿತು.

ಮಂಗಳೂರಿನ ಕೇಕ್ ಪ್ರಿಯರಿಗೆ ಸಿಹಿ ಸುದ್ದಿ. ಬೇಕ್ಸ್ ಆಂಡ್ ಕೇಕ್ಸ್ ಕುಡ್ಲ ಐಸ್‌ಕ್ರೀಂ ಪಾರ್ಲರ್ ಉರ್ವಸ್ಟೋರ್‌ನಲ್ಲಿ ಉದ್ಘಾಟನೆಗೊಂಡಿತು. ಈಗಗಾಲೇ ಮಂಗಳೂರಿನ ಜನರ ನೆಚ್ಚಿನ ಪಾರ್ಲರ್ ಇದಾಗಿದ್ದು, ಜನಪ್ರೀಯತೆಯನ್ನು ಪಡೆದುಕೊಂಡಿದೆ.ನೂತನ ಬೇಕ್ಸ್ ಆಂಡ್ ಕೇಕ್ಸ್ ಐಸ್‌ಕ್ರೀಂ ಪಾರ್ಲರನ್ನು ಮೂಲ್ಕಿ ಮೂಡುಬಿದರೆ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.ಆನಂತರ ನಡೆದ ಸಭಾ ಕಾರ್ಯಕ್ರಮವನ್ನು ತೋಕೋರು ಗುತ್ತು ಯಜಮಾನ ದಿವಾಕರ್ ಆಳ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಅವರು, ಒಂದು ಉದ್ಯಮವನ್ನು ಆರಂಭಿಸಬೇಕಾದರೆ ಅದಕ್ಕೆ ಶ್ರಮ ಮುಖ್ಯ. ಹಾಗಿದ್ದಲ್ಲಿ ಮಾತ್ರ ಉದ್ಯಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಅವರು ಬೇಕ್ಸ್ ಆಂಡ್ ಕೇಕ್ಸ್‌ಗೆ ಶುಭ ಹಾರೈಸಿದರು.ಇದೇ ಸಂದರ್ಭ ಮಾತನಾಡಿದ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರು ಬೇಕರಿ ಉದ್ಯಮದಲ್ಲಿ ಅನುಭವಿಶಾಲಿಯಾದ ಪುಷ್ಪರಾಜ್ ಶೆಟ್ಟಿ ಅವರು, ಬೇಕರಿ ಉದ್ಯಮವನ್ನು ಯಶಸ್ವಿಯಾಗಿ ನಡೆಸುಕೊಂಡು ಹೋಗುವುದಲ್ಲಿ ಸಂಶಯವಿಲ್ಲ ಎಂದ ಅವರು, ತನ ಬೇಕ್ಸ್ ಆಂಡ್ ಕೇಕ್ಸ್‌ಗೆ ಶುಭ ಹಾರೈಸಿದರು.ಇನ್ನು ಬೇಕ್ಸ್ ಆಂಡ್ ಕೇಕ್ಸ್‌ನಲ್ಲಿ ಬರ್ತ್‌ಡೇ ಕೇಕ್ಸ್, ವೆಡ್ಡಿಂಗ್ ಕೇಕ್ಸ್, ಫ್ರೆಶ್ ಜ್ಯೂಸ್, ತಿಕ್ ಮಿಲ್ಕ್ ಶೇಕ್ಸ್, ಲಭ್ಯವಿದ್ದು, ಇದರ ಜೊತೆಗೆ ವಿವಿಧ ಬಗೆಯ ಟೇಸ್ಟಿಯನ್ನು ಹೊಂದಿದ ಐಸ್‌ಕ್ರೀಂ ಪಾರ್ಲರ್, ಬೇಕರಿ ತಿಂಡಿ ತಿನಿಸುಗಳು ಲಭ್ಯವಿದೆ.

ಈ ಸಂದರ್ಭ ಕಾರ್ಯಕ್ರಮದಲ್ಲಿ ಬೇಕ್ಸ್ ಆಂಡ್ ಕೇಕ್ಸ್ ಪುಷ್ಪರಾಜ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ರಾಧಾಕೃಷ್ಣ, ಅಲ್ಡೆನ್ ಪಾಯಿಸ್, ಹಾಜಿ ಮೂಸಬ್ಬ, ದೇಜಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *