Header Ads
Header Ads
Header Ads
Breaking News

ಬೇಜವಾಬ್ದಾರಿ ಮರೆತು ಸಮಯ ಪ್ರಜ್ಞೆ ಮೆರೆದ ಯುವಕರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಪ್ಪಿದ ಭಾರೀ ದುರಂತ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಒಂದು ಸೂಕ್ತ ಉದಾಹರಣೆ

ಬೇಜವಾಬ್ದಾರಿ ಎಂಬುದು ದುರಂತಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ಮಾತು ಎಲ್ಲರಿಗೂ ತಿಳಿದಿದೇ ಇದೆ. ಇದಕ್ಕೆ ಒಂದು ಪಕ್ಕಾ ಉದಾಹರಣೆ ಇಲ್ಲಿದೆ ನೋಡಿ. ಇವತ್ತು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ-66 ರ ಪಕ್ಕದ ವಿದ್ಯುತ್ ಕಂಬದಲ್ಲಿ 440 ವೋಲ್ಟ್ ಸಾಮರ್ಥ್ಯದ ವಿದ್ಯುತ್ ತಂತಿ ಜೋತು ಬಿದಿತ್ತು. ಇದರಿಂದ ಉಂಟಾದ ಅನಾಹುತದಿಂದ ಏನೆಲ್ಲಾ ಅವಾಂತರ ಆಯಿತು ನೀವೇ ನೋಡಿ.॒

ಇದು ರಾಷ್ಟ್ರೀಯ ಹೆದ್ದಾರಿ 66..ಈ ಮಾರ್ಗವಾಗಿ ಗೋವಾದಿಂದ ಮಂಗಳೂರು ಕಡೆ ಸಾಗಿದ ಅಮೋನಿಯಾ ಸಿಲಿಂಡರ್ ತುಂಬಿದ್ದ ಸರಕು ವಾಹನದ ಚಾಲಕ ಭಟ್ಕಳದ ಶಿರಾಲಿಯ ಜನತಾ ವಿದ್ಯಾಲಯ ಶಾಲೆಯ ಪಕ್ಕದಲ್ಲಿ ನೆರಳಿನಲ್ಲಿ ವಾಹನ ನಿಲ್ಲಿಸುವ ಸಂಧರ್ಭ, ಅಲ್ಲಿಯೇ ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬದ ಎಲ್.ಟಿ. ಲೈನ್ ವೊಂದು ಜೋತು ಬಿದ್ದಿದ್ದು, ಈ ವಿದ್ಯುತ್ ತಂತಿ ನಿಲ್ಲಿಸುತ್ತಿದ್ದ ಸರಕು ವಾಹನದ ಹಿಂಬದಿಗೆ ತಗುಲಿ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ. ಆದರೆ ಅದೃಷ್ಟವಶಾತ್ ಅಲ್ಲಿನ ಸ್ಥಳಿಯ ಕೆಲವು ಯುವಕರೆಲ್ಲ ಬೆಂಕಿಯನ್ನು ಕಂಡು ತಕ್ಷಣ್ಕ ಬೆಂಕಿಯನ್ನು ನಂದಿಸುವ ಪ್ರಯತ್ನದಲ್ಲಿ ಯಶಶ್ವಿಯಾದರು. ಬಳಿಕ ವಾಹನದಲ್ಲಿ ಅಮೋನಿಯ ಸಿಲಿಂಡರ್‌ವಿದ್ದ ಅಗ್ನಿ ಶಾಮಕದಳಕ್ಕೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿಗಳು ಸಿಲಿಂಡರ್‌ನಲ್ಲಿ ಏನಾದರೂ ಬೆಂಕಿ ತಗುಲಿದೆಯೆ ಎಂದು ಪರಿಶೀಲಿಸಿದ್ದರು. ಘಟನಾ ಸ್ಥಳದಲ್ಲಿ ಭಯದ ವಾತಾವರಣವೇ ಸೃಷ್ಟಿಯಾಗಿದ್ದು, ದೊಡ್ಡ ಅವಘಡ ತಪ್ಪಿದಂತಾಗಿದೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಪೋಲೀಸರು ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ. ಒಟ್ಟಾರೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ ಶಿರಾಲಿಯ ಸ್ಥಳಿಯ ಯುವಕರು, ಸಾರ್ವಜನಿಕರ ಕಾರ್ಯ ಮೆಚ್ಚುವಂತಹದ್ದಾಗಿದೆ. ವಾಹನದ ಚಾಲಕ ಹಾಗೂ ನಿರ್ವಾಹಕ ಅವಗಢದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

ವರದಿ: ರಾಘವೇಂದ್ರ ಮಲ್ಯ ಭಟ್ಕಳ

Related posts

Leave a Reply