
ಬೇಲೂರು ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿವಿಲ್ ನ್ಯಾಯಾಧೀಶ ಶಶಿಧರ್ ಎಂ ಗೌಡ ಅವರು, ಜನ ಸಾಮಾನ್ಯರ ಜಲಮೂಲಗಳನ್ನು ರಕ್ಷಣೆ ಮಾಡದೆ ಹೋದರೆ ಮುಂದಿನ ಪೀಳಿಗೆಗೆ ಜಲಕ್ಷಾಮ ಎದುರಿಸಬೇಕಾಗುತ್ತದೆ ಎಂದ್ರು.
ಇದೇ ವೇಳೆ ಸಿವಿಲ್ ನ್ಯಾಯಾಧೀಶ ನಾಗೇಶ್ ಮಾತನಾಡಿ ಪ್ರತಿಯೊಂದು ಜೀವಿಗೂ ನೀರು ಅತ್ಯವಶ್ಯಕವಾಗಿದ್ದು ನೀರಿಲ್ಲದೆ ಪ್ರಾಣಿಸಂಕುಲ ಬದುಕಲು ಸಾಧ್ಯವಿಲ್ಲ ವಿಶ್ವದಲ್ಲೇ 70 ಭಾಗ ನೀರಿನ ಮೂಲ ಹೊಂದಿದ್ದು ಇದರಲ್ಲಿ ಶೇಕಡ 3ರಷ್ಟು ಮಾತ್ರ ಶುದ್ಧವಾಗಿದ್ದು ಕುಡಿಯಲು ಯೋಗ್ಯವಾಗಿದೆಯೇ ಇಂಥ ಪವಿತ್ರ ಜಲವನ್ನು ಹಾಳು ಮಾಡುತ್ತಿದ್ದೇವೆ ಎಂದು ವಿಷಾದಿಸಿದರು. ಈ ವೇಳೆ ವಕೀಲ ಸಂಘದ ಚಂದ್ರು, ಸರಕಾರಿ ಅಭಿಯೋಜಕರಾದ ಜಯಶ್ರೀ, ಶಶಿಕಲಾ, ವಕೀಲರಾದ ಧರ್ಮೇಗೌಡ, ಎಸ್ ಎನ್. ಚಂದ್ರು ಪುಟ್ಟಸ್ವಾಮಿಗೌಡ, ಮಲ್ಲಿಕಾರ್ಜುನ, ಆರಕ್ಷಕ ಉಪ ನಿರೀಕ್ಷಕರು ಹಳೇಬೀಡು ಗಿರಿಧರ್ ಉಪಸ್ಥಿತರಿದ್ದರು.