Header Ads
Header Ads
Breaking News

“ಬೇಸಿಗೆಯಲ್ಲಿ ಕಾಸಿಲ್ಲ.. ಮಳೆಗಾಲದಲ್ಲಿ ಬಿಸಿಲಿಲ್ಲ” ನವಯುಗ್ ಅರೆಬರೆ ಕಾಮಗಾರಿ ಅವಾಂತರಕ್ಕೆ ಸಂಚಾರ ಅಸ್ತವ್ಯಸ್ತ

ರಾಷ್ಟ್ರೀಯ ಹೆದ್ದಾರಿ66ರ ಚತುಷ್ಪಥ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ನವಯುಗ್ ಕಂಪನಿಗೆ, ಕಾಮಗಾರಿ ನಡೆಸಲು ಬೇಸಿಗೆ ಕಾಲದಲ್ಲಿ ಕಾಸಿಲ್ಲ. ಮಳೆಗಾಲದಲ್ಲಿ ಬಿಸಿಲಿಲ್ಲ. ಈ ಅವಾಂತರಕ್ಕೆ ತುತ್ತಾಗುತ್ತಿರುವುದು ಹೆದ್ದಾರಿ ಸಂಚಾರಿಗಳು.ಮಳೆ ಆರಂಭಗೊಳ್ಳುತ್ತಿದಂತೆ ಕಾಮಗಾರಿಗೆ ಚಾಲನೆ ನೀಡಿದ ಕಂಪನಿಗೆ ಇದೀಗ ಬಿಸಿಲಿನ ಕೊರತೆ, ಅರೆಬರೆ ಕಾಮಗಾರಿಯ ಫಲವಾಗಿ ಪಡುಬಿದ್ರಿ ಪೇಟೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಹೆದ್ದಾರಿ ಸಂಚಾರಿಗಳು ಸಮಸ್ಯೆ ಅನುಭವಿಸುವಂತ್ತಾಗಿದೆ ಎಂಬುದಾಗಿ ನ್ಯಾಯವಾದಿ ಶಶಿಧರ್ ಶೆಟ್ಟಿ ಆರೋಪಿಸಿದ್ದಾರೆ.

ಅದೇಷ್ಟೋ ವರ್ಷಗಳ ಹಿಂದೆ ಕಾಮಗಾರಿ ಸಂಪೂರ್ಣಗೊಳ್ಳ ಬೇಕಾಗಿದ್ದರೂ, ಈ ಬಾರಿಯೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳು ಗೊಚರಿಸುತ್ತಿಲ್ಲ, ಕಾರಣ ಮಳೆಯ ಆರ್ಭಟ ಒಂದು ಕಡೆಯಾದರೆ ಮತ್ತೊಂದು ಕಡೆ ಪಡುಬಿದ್ರಿ ಕಾಮಗಾರಿಗೆ ಪ್ರಭಾವಿಗಳ ಕರಿನೆರಳು ಕಾರಣವಾಗಿದೆ, ಎಲ್ಲಾ ಕಡೆಗಳಲ್ಲೂ ಹೆದ್ದಾರಿ ಇಲಾಖೆಯ ನಿರ್ದೇಶನದಂತೆ ಯಾವುದೇ ಅಡೆತಡೆಗಳಿಲ್ಲದೆ ಕಾಮಗಾರಿ ಪೂರ್ಣಗೊಂಡಿದ್ದರೂ, ಪಡುಬಿದ್ರಿ ಪೇಟೆಯ ವಿಚಾರಕ್ಕೆ ಬಂದರೆ ಮಾತ್ರ ಇಲ್ಲಿ ಕೇವಲ ೨೨ ಮೀಟರ್ ಅಂತರದಲ್ಲಿ ಚತುಷ್ಪಥ ರಸ್ತೆ, ರಸ್ತೆ ವಿಭಜಕ ಸಹಿತ ಎರಡು ಸರ್ವಿಸ್ ರಸ್ತೆಗಳು ಪೂರ್ಣಗೊಳ್ಳಬೇಕಾಗಿದೆ. ನಿರಂತರ ಬ್ಲಾಕ್ ಸಮಸ್ಯೆಯಿಂದ ತತ್ತರಿಸುತ್ತಿದ್ದ ಪಡುಬಿದ್ರಿ ಪೇಟೆಯ ಸಮಸ್ಯೆ ಕಾಮಗಾಗಾರಿ ಪೂರ್ಣಗೊಂಡರೂ ಜೀವಂತವಾಗಿರುವಂತೆ ಕಾಣಿಸುತ್ತಿದೆ ಎಂದರು.

ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ ಮಾತನಾಡಿ ಪಡುಬಿದ್ರಿ ಪೇಟೆಭಾಗದಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳವೇ ಇಲ್ಲ ಎಂಬಂತೆ ಇದ್ದ ಕಟ್ಟಡಗಳನ್ನು ತುಂಡರಿಸಿ ಅದಕ್ಕೆ ತೇಪೆ ಹಾಕಿ ಪುನರ್ ನಿರ್ಮಾಣಗೊಳಿಸಿ ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಯಾವುದೇ ಕಾರಣಕ್ಕೆ ಜನರಿಗೆ ಸಮಸ್ಯೆಯೋಡ್ಡಿ ಸರ್ವಿಸ್ ರಸ್ತೆಯಲ್ಲಿ ಯಾವುದೇ ವಾಹನಗಳನ್ನು ಪಾರ್ಕಿಂಗ್ ಮಾಡಿ ಸಂಚಾರಕ್ಕೆ ಅಡ್ಡಿ ಮಾಡಿದ್ದೇ ಆದಲ್ಲಿ ಮತ್ತೆ ನಮ್ಮ ಹೋರಾಟ ಸಮಿತಿಯ ಮುಖಾಂತರ ಉಗ್ರ ಪ್ರತಿಭಟನೆ ಮಾಡಬೇಕಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.
ನವಯುಗ್ ಕಂಪನಿಯು ಶೇಕಡ ೭೦ ಕಾಮಗಾರಿಯನ್ನು ಪೂರ್ಣಗೊಳಿಸದೆ ಕಾನೂನಿಗೆ ವಿರುದ್ಧವಾಗಿ ಟೋಲ್ ಸಂಗ್ರಹ ಆರಂಭಿಸಿದ್ದು, ಇಷ್ಟರಲ್ಲೇ ಕೋಟಿ ಗಟ್ಟಲೆ ಸಂಗ್ರಹ ನಡೆಸಿದೆ. ಇದರ ಬಗ್ಗೆ ಪ್ರಶ್ನೆ ಮಾಡ ಬೇಕಾಗಿದ್ದ ಹೆದ್ದಾರಿ ಇಲಾಖೆ ತನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯ ಸಲ್ಲದು ಹೆದ್ದಾರಿ ಇಲಾಖೆ ನವಯುಗ್ ಕಂಪನಿಯ ವಿಚಾರದಲ್ಲಾಗಲೀ.. ಪಡುಬಿದ್ರಿ ಪೇಟೆಯ ಚತುಷ್ಪಥ ಕಾಮಗಾರಿಯ ವಿಚಾರದಲ್ಲಾಗಲೀ ತಾರತಮ್ಯ ನಡೆಸಿದರೆ ಮತ್ತೆ ಹೋರಾಟ ಅನಿವಾರ್ಯ ಎಂಬುದಾಗಿ ಶೇಖರ್ ಹೆಜಮಾಡಿ ಎಚ್ಚರಿಸಿದ್ದಾರೆ.

Related posts

Leave a Reply