Header Ads
Header Ads
Header Ads
Breaking News

ಬೈಂದೂರಿನಲ್ಲಿ ತೆರೆದ ಮನೆ ಮಾಸೋತ್ಸವ ಕಾರ್ಯಕ್ರಮ ಪೊಲೀಸರೆಂದರೆ ಜನಸೇವಕರು ಬೈಂದೂರು ಠಾಣೆ ಪಿ‌ಎಸ್‌ಐ ತಿಮ್ಮೇಶ್ ಬಿ. ಅಭಿಪ್ರಾಯ

ಕುಂದಾಪುರ: ಪೊಲೀಸರೆಂದರೆ ನ್ಯಾಯತೀರ್ಮಾನ ಮಾಡುವ ನ್ಯಾಯಾಧೀಶರಲ್ಲ, ಆದರೆ ನಿಮ್ಮ ದೂರನ್ನ ಸರಿಯಾದ ರೀತಿಯಲ್ಲಿ ತನಿಖೆ ಮಾಡಿ ನ್ಯಾಯಾಧೀಶರ ಮುಂದೆ ವರದಿ ಸಲ್ಲಿಸುವ ಜನಸೇವಕರು ಎಂದು ಬೈಂದೂರು ಪಿ‌ಎಸ್‌ಐ ತಿಮ್ಮೇಶ್ ಬಿ. ಹೇಳಿದರು.

ಬೈಂದೂರು ಠಾಣೆಯಲ್ಲಿ ಶಿಕ್ಷಣ ಸಂಪನ್ಮೂಲ ಸಮಿತಿಯ ವತಿಯಿಂದ ನಡೆದ ತೆರದ ಮನೆ ಮಾಸೋತ್ಸವ ಕಾರ್‍ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಜನರಲ್ಲಿ ತಪ್ಪು ಕಲ್ಪನೆ ಇದೆ. ಪೊಲೀಸರು ನ್ಯಾಯ ತೀರ್ಮಾನ ಮಾಡುವವರು ಎಂದು ಆದರೆ ಸಣ್ಣ ಪುಟ್ಟ ವಿಚಾರಗಳ ಸಮಸ್ಯೆಗಳನ್ನ ಎರಡು ಪಾರ್ಟಿಗಳ ಒಪ್ಪಿಗೆಗೆ ಅನುಗುಣವಾಗಿ ಇತ್ಯರ್ಥಗೊಳಿಸುವ ಯತ್ನವನ್ನ ಮಾಡುತ್ತೇವೆ. ಆದರೆ ನಾವು ನ್ಯಾಯ ತೀರ್ಮಾನ ಮಾಡುವುದಿಲ್ಲ ಎಂದು ಮಕ್ಕಳಿಗೆ ತಿಳಿ ಹೇಳಿದರು

ನಂತರ ಪೊಲೀಸ್ ಠಾಣೆಯಲ್ಲಿ ನಡೆಯುವ ಕಾರ್ಯಗಳನ್ನ ಮತ್ತು ಹುದ್ದೆಗಳ ಬಗ್ಗೆ ಮಕ್ಕಳಿಗೆ ವಿವರವಾಗಿ ತಿಳಿಸಿದರು. ಬೈಂದೂರು ವಲಯ ಎಸ್‌ಡಿ‌ಎಂಸಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಸದಸ್ಯೆ ಜ್ಯೋತಿ, ಜೊತೆ ಕಾರ್‍ಯದರ್ಶೀ ಯಾಮಿನಿ, ಬೈಂದೂರಿನ ಸ.ಹಿ.ಪ್ರಾ ಶಾಲೆಯ ಶಿಕ್ಷಕ ಗಣಪತಿ ಹೋಬಳೀಧಾರ್ ಉಪಸ್ಥಿತರಿದ್ದರು.

ವರದಿ: ಹರೀಶ್ ಕಿರಣ್ ತುಂಗ ಕುಂದಾಪುರ

Related posts

Leave a Reply