Header Ads
Header Ads
Header Ads
Breaking News

ಬೈಂದೂರಿನ ಜ್ಯುವೆಲ್ಲರಿಯಲ್ಲಿ ಕಳವು ಪ್ರಕರಣ: ಐವರು ನೇಪಾಳಿಗರ ಸೆರೆ

ಶಿರೂರು ಸಮೀಪದ ಗೋಲ್ಡ್ ಪ್ಯಾಲೇಜ್ ಜ್ಯುವೆಲ್ಲರಿ ಮಳಿಗೆಯಿಂದ ಕಳವುಗೈದ ಪ್ರಕರಣವೊಂದರಲ್ಲಿ ನೇಪಾಳ ಮೂಲದ ಐವರು ಆರೋಪಿಗಳನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.


ಶಿವಾಸಿಂಗ್ ಬಹುದ್ದೂರ್, ಕಮರ್ ಸಿಂಗ್, ರಮೇಶ್ ಸಿಂಗ್ ಪಾರ್ಕಿ, ಹರ್ಕ್ ಬಹುದ್ದೂರ್ ಸೌದ್, ಪ್ರೇಮ್ ಬಹುದ್ದೂರ್ ಸೌದ್ ಬಂಧಿತರು. ಉಡುಪಿ ಜಿಲ್ಲೆಯ ಬೈಂದೂರಿನ ಶೀರೂರಿನಲ್ಲಿ ಗೂರ್ಖಾ ಹಾಗೂ ಫಾಸ್ಟ್ ಫುಡ್ ವೃತ್ತಿಗಳನ್ನು ಮಾಡುತ್ತಿದ್ದ ಆರೋಪಿಗಳು ಅಲ್ಲೇ ಸಮೀಪದಲ್ಲಿದ್ದ ಗೋಲ್ಡ್ ಪ್ಯಾಲೇಜ್ ಜ್ಯುವೆಲ್ಲರಿ ಮಳಿಗೆಯನ್ನು ಟಾರ್ಗೆಟ್ ಮಾಡಿ ಕಳೆದ ಏಪ್ರಿಲ್ ತಿಂಗಳಲ್ಲಿ ಕಳವು ನಡೆಸಿದ್ದರು. ಕಳವು ನಡೆಸಿದ ಆರೋಪಿಗಳು ನೇಪಾಳಕ್ಕೆ ಹೋಗಿ ಮತ್ತೆ ಬೈಂದೂರಿಗೆ ಬಂದಿದ್ದರು ಎನ್ನಲಾಗಿದ್ದು ಈ ಬಗ್ಗೆ ಖಚಿತ ಮಾಹಿತಿ ಪಡೆದ ಡಿಸಿಐಬಿ ಪೊಲೀಸರು ಆರೋಪಿಗಳನ್ನು ಬೈಂದೂರು ಪರಿಸರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರಿಂದ 1ಲಕ್ಷ 80 ಸಾವಿರ ಮೌಲ್ಯದ 3 ಕೆಜಿ ಬೆಳ್ಳಿ ಕಾಲು ಚೈನ್ ವಶಕ್ಕೆ ಪಡೆದು ಆರೋಪಿಗಳನ್ನು ಹಾಗೂ ಆಭರಣಗಳನ್ನು ಬೈಂದೂರು ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ.

Related posts

Leave a Reply