Breaking News

ಬೈಂದೂರು ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿ ಗುಡ್ಡ ಕುಸಿತ, ಉಡುಪಿ ಕಾರವಾರ ಸಂಚಾರ ಐದು ಗಂಟೆ ಸ್ಥಗಿತ


ಬೈಂದೂರು ಇಲ್ಲಿನ ಒತ್ತಿನೆಣೆ ಬಳಿ ಬುಧವಾರ ನಸುಕಿನ ೪.೩೦ರ ವೇಳೆಗೆ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಬಿದ್ದು ನಿರಂತರ ೫ ಗಂಟೆಗಳ ಕಾಲ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ನಡೆದಿದೆ.
ಹೆದ್ದಾರಿ ಕಾಮಾಗಾರಿಗಾಗಿ ಗುಡ್ಡ ಕೊರೆಯಲಾಗಿದ್ದು, ಭಾರೀ ಮಳೆಯಿಂದಾಗಿ ಕುಸಿದು ಬಿದ್ದ ಪರಿಣಾಮ ಬೆಳಗ್ಗಿನಿಂದ ನೂರಾರು ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು. ಗುಡ್ಡ ೪.೩೦ರ ವೇಳೆಗ ಕುಸಿದು ಬಿದ್ದರೆ ಸ್ಥಳಕ್ಕೆ ಕೇವಲ ೩ ಜೆಸಿಬಿಗಳೊಂದಿಗೆ ೭.೩೦ಕ್ಕೆ ಆಗಮಿಸಿ ತೆರವು ಕಾರ್ಯ ಆರಂಭಿಸಲಾಗಿದೆ. ಇದು ನೂರಾರು ವಾಹನ ಸವಾರರ ಆಕ್ರೋಶಕ್ಕೆ ಕಾರವಾಯಿತು. ಮಣ್ಣು ತೆರವು ಮಾಡಿ ೯.೩೦ರ ವೇಳೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಭಟ್ಕಳ ಕಡೆಯಿಂದ ಬರುತ್ತಿರುವ ಮತ್ತು ತೆರಳುತ್ತಿರುವ ಬಸ್‌ಗಳು ಸೇರಿದಂತೆ ನೂರಾರು ವಾಹನಗಳ ಸವಾರರು ಪರದಾಡಬೇಕಾಯಿತು.

Related posts

Leave a Reply