Header Ads
Header Ads
Breaking News

ಬೈಂದೂರು, ಕಾರ್ಕಳದಲ್ಲಿ ಕೆ.ಎಸ್.ಅರ್.ಟಿ.ಸಿ ಡಿಪೋ ಉಡುಪಿಯಲ್ಲಿ ವಿಭಾಗೀಯ ಘಟಕ ಸ್ಥಾಪನೆ ಉಡುಪಿಯಲ್ಲಿ ನಿಗಮ ಅದ್ಯಕ್ಷ ಗೋಪಾಲ್ ಪೂಜಾರಿ

 

ಬೈಂದೂರು, ಕಾರ್ಕಳದಲ್ಲಿ ಡಿಪೋ ಸ್ಥಾಪಿಸಿ, ಉಡುಪಿಯಲ್ಲಿ ಕೆ‌ಎಸ್‌ಆರ್‌ಟಿಸಿ ವಿಭಾಗೀಯ ಘಟಕ ತೆರೆಯಲಾಗುವುದು ಎಂದು ಕೆ‌ಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ರಾಜ್ಯ ರಸ್ತೆ ಸಾರಿಗೆ ನಿಗಮದ ಸಾರಿಗೆ ಪರವಾನಿಗೆ ಮಂಜೂರಾತಿ ಕುರಿತು ಚರ್ಚಿಸಲು ಆಯೋಜಿಸಿರುವ ಸಭೆಯಲ್ಲಿ ಮಾಧ್ಯಮದವರಿಗೆ ಅವರು ಮಾಹಿತಿ ನೀಡಿದರು.

ಬೈಂದೂರು ಮತ್ತು ಕಾರ್ಕಳದಲ್ಲಿ ಡಿಪೋ ತೆರೆಯಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಲುವಾಗಿ ತಲಾ ೧೦ ಕೋ. ರೂ. ಅನುದಾನ ಮಂಜೂರಾಗಲಿದೆ. ಬೈಂದೂರಿನಲ್ಲಿ ಜಾಗ ಲಭ್ಯವಿದ್ದು, ಕಾರ್ಕಳದಲ್ಲಿ ಜಾಗ ನೀಡಿದರೆ ಶೀಘ್ರ ಆರಂಭಿಸಲಾಗುವುದು. ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ಸೇವೆ ನೀಡುವುದು ನಮ್ಮ ಉzಶವಾಗಿದ್ದು, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗಲು ಎಲ್ಲ ಕಡೆಯು ಬಸ್ ಸೇವೆ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಕೆ‌ಎಸ್‌ಆರ್‌ಟಿಸಿ ಲಾಭಕ್ಕಾಗಿ ಬಸ್‌ಗಳನ್ನು ಓಡಿಸುತ್ತಿಲ್ಲ. ಜನರ ಸೇವೆಗಾಗಿ ಇರುವುದು ಎಂದರು. ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆಗಳಿದ್ದರೂ, ಬಸ್‌ಗಳಿಲ್ಲ ಎನ್ನುವ ದೂರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಬಸ್ ಸೌಕರ್ಯ ಕಲ್ಪಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ಮಾತನಾಡಿ, ರಾಜ್ಯದಲ್ಲಿ ಈವರೆಗೆ ೧೩ ಲಕ್ಷ ಕಿ.ಮೀ. ಓಡಿದ ಬಸ್‌ಗಳನ್ನು ಇನ್ನು ೨-೩ ತಿಂಗಳಲ್ಲಿ ಹಾಗೂ ಈಗಿರುವ ಎಲ್ಲ ವೋಲ್ವೊ ಬಸ್‌ಗಳನ್ನು ಹಂತ ಹಂತವಾಗಿ ಬದಲಿಸಲಾಗುವುದು. ೮೫೦ ಬಸ್‌ಗಳನ್ನು ರಿಪ್ಲೇಸ್ ಮಾಡಿ ಹೊಸದಾಗಿ ೧೨೦ ವೋಲ್ವೊ ಸಹಿತ ಒಟ್ಟು ೧,೭೦೬ ಬಸ್‌ಗಳನ್ನು ಖರೀದಿ ಮಾಡಲಾಗುವುದು. ರಾಜ್ಯದಾದ್ಯಂತ ಕೆ‌ಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ರಿಯಾಯತಿ ದರದಲ್ಲಿ ೧೮.೫೦ ಲಕ್ಷ ವಿದ್ಯಾರ್ಥಿ ಪಾಸ್ ವಿತರಿಸಲಾಗಿದೆ. ೪.೫೦ ಲಕ್ಷ ಎಸ್‌ಸಿ ಹಾಗೂ ಎಸ್‌ಟಿ ವಿದ್ಯಾರ್ಥಿಗಳು ಹಾಗೂ ೧ ರಿಂದ ೭ನೇ ವರೆಗಿನ ಮಕ್ಕಳಿಗೆ ಉಚಿತ ಬಸ್‌ಪಾಸ್ ವಿತರಿಸಲಾಗಿದೆ. ಕೆ‌ಎಸ್‌ಆರ್‌ಟಿಸಿಯಲ್ಲಿ ೩ ಕಾರ್ಪೊರೇಶನ್‌ಗಳಿದ್ದರೂ, ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವ ಮೂಲಕ ದೇಶದಲ್ಲಿಯೇ ಅಗ್ರಗಣ್ಯ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಒಟ್ಟು ೮೧ ಡಿಪೋ ೧೬ ವಿಭಾಗೀಯ ಘಟಕಗಳಿವೆ. ಎಲ್ಲ ಘಟಕಗಳಲ್ಲಿ ವರ್ಕ್ ಶಾಪ್‌ಗಳಿದ್ದು, ನುರಿತ ಮೆಕ್ಯಾನಿಕ್, ಇಂಜಿನಿಯರ್‌ಗಳಿದ್ದು, ಬಸ್‌ಗಳ ನಿರ್ವಹಣೆ ಮತ್ತು ಜನರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ಪ್ರತಿ ೧ ಲಕ್ಷ ಕಿ.ಮೀ. ಗೆ ೦.೧ ಅಪಘಾತ ಪ್ರಮಾಣವಷ್ಟೇ ದಾಖಲಾಗಿದೆ ಎಂದರು.
ವರದಿ:ಪಲ್ಲವಿ ಸಂತೋಷ್

Related posts

Leave a Reply