Header Ads
Header Ads
Breaking News

ಬೈಂದೂರು ಜನಜಾತ್ರೆಯಾದ ಕರ್ಕಾಟಕ ಅಮಾವಾಸ್ಯೆ. ಕಡಲತೀರದ ಪಡುವರಿಯ ಸೋಮೇಶ್ವರ ದೇವಸ್ಥಾನ.

 ಶನಿವಾರ ಕರ್ಕಾಟಕ ಅಮಾವಾಸ್ಯೆ ಕಡಲತೀರದ ಶ್ರದ್ಧಾಕೇಂದ್ರಗಳಾದ ಬೈಂದೂರು ತಾಲೂಕಿನ ಪಡುವರಿಯ ಸೋಮೇಶ್ವರ ದೇವಸ್ಥಾನಗಳಲ್ಲಿ ಜನಜಾತ್ರೆ ಮೇಳೈಸಿತು.ಬೈಂದೂರಿನ ಕಡಲು ನಡುವಿನ ಸೋಮೇಶ್ವರ ದೇವಸ್ಥಾನಕ್ಕೆ ಬೆಳಗ್ಗಿನಿಂದ ಎಲ್ಲೆಡೆಯಿಂದ ಜನಪ್ರವಾಹ ಹರಿದುಬಂತು. ಹೊತ್ತು ಏರುತ್ತಿದ್ದಂತೆ ಲಭ್ಯ ವಾಹನಗಳಲ್ಲಿ, ಕಾಲ್ನಡಿಗೆಯಲ್ಲಿ ಜನ ಬಂದು ಸೇರಿದರು.

ಭಕ್ತಾಭಿಮಾನಿಗಳು ಬಂದವರೆಲ್ಲ ದೇವರ ದರ್ಶನ ಮಾಡಿ, ಹಣ್ಣುಕಾಯಿ, ಕಾಣಿಕೆ ಸಮರ್ಪಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಹೊರಗೆ ಮತ್ತು ಸಮುದ್ರ ತೀರದಲ್ಲಿ ಬೀಡುಬಿಟ್ಟಿದ್ದ ತಿಂಡಿ, ಮಣಿಸರಕಿನ ಅಂಗಡಿಗಳಲ್ಲಿ ಖರೀದಿ ಮಾಡಿದರು. ಇಲ್ಲಿನ ಸಂಪ್ರದಾಯದಂತೆ ನವವಧೂವರರು ದೇವರಿಗೆ ಹರಕೆ ಸಲ್ಲಿಸಿದರು.

Related posts

Leave a Reply