Header Ads
Header Ads
Breaking News

ಬೈಂದೂರು ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರ ಕೊರತೆ

ಪೇಸ್: ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬಂದರು ಕಾಲೇಜಿನಲ್ಲಿ ಸರ್ಕಾರಿ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸರು ಇಲ್ಲದೇ ಮೂರು ತಿಂಗಳು ಆಯಿತು. ಇದರನ್ನು ವಿರೋಧಿ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದರು.
ಎಲ್ಲಾ ಪ್ರಥಮ ದರ್ಜೇ ಕಾಲೇಜಿನಲ್ಲಿ ಪರೀಕ್ಷೇ ಮುಗಿದರು, ನಮ್ಮ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ಇಲ್ಲದೇ ಬೋಧನೆ ನಡೆಯುತ್ತಿಲ್ಲ. ಸರ್ಕಾರವು ನಮ್ಮ ವಿದ್ಯಾಭ್ಯಾಸವನ್ನು ಹಾಳು ಮಾಡುತ್ತಿದ್ದೆ, ಹಾಗಾದರೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಾಕೆ?. ಅತಿಥಿ ಉಪನ್ಯಾಸಕರು ಇಲ್ಲದೇ ಕಳೆದ ಮೂರು ತಿಂಗಳು ಕಳೆಯಿತು. ಮೊದಲು ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಹೊರೆತು ಪಡಿಸಿ ಎಲ್ಲಾ ೪೫ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ವರ್ಷದಲ್ಲಿ ಸರ್ಕಾರವೂ ಇನ್ನೂ ಕೂಡಾ ಕಳೆದ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾದಕರನ್ನು ಈ ವರ್ಷವೂ ಕೂಡಾ ಮುಂದುವರೆಸುವ ನಿರ್ಧಾರ ಸರ್ಕಾರ ತೆಗೆದುಕೊಂಡಿಲ್ಲ, ಹಾಗೂ ಬೇರೆ ಸರ್ಕಾರಿ ಉಪನ್ಯಾಸಕರ ವ್ಯವಸ್ಥೆಯನ್ನು ಕೂಡಾ ಮಾಡಿಲ್ಲ ಇದರಿಂದ ನಮ್ಮ ವಿದ್ಯಾಭ್ಯಾಸ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಈ ನಮ್ಮ ವಿದ್ಯಾಭ್ಯಾಸಕ್ಕೆ ಅರ್ಧಕ್ಕೆ ನಿಲ್ಲಿಸಲು ನೇರವಾಗಿ ಸರ್ಕಾರವೇ ಹೊಣೆಯಾಗಿದೆ.

ಈ ಹಿಂದೆ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ನೇಮಕಗೊಳಿಸಿ ಅಥವಾ ನಮಗೆ ಬೇರೆ ಉಪನ್ಯಾಸಕರನ್ನು ನೇಮಕ ಮಾಡಿ ತರಗತಿಗಳು ಸಸೂತ್ರವಾಗಿ ನಡೆಯಲು ಅವಕಾಶ ಮಾಡಬೇಕು. ಈ ಮೂರು ತಿಂಗಳು ಪಾಠ ನಡೆಯದಿದ್ದುರಿಂದ ನಮಗೆ ಅಕ್ಟೋಬರ್ ಪರೀಕ್ಷೇಯನ್ನು ಒಂದು ತಿಂಗಳು ಮುಂದುವಸಬೇಕು. ಈ ಎಲ್ಲಾ ಸಮಸ್ಯೆಯನ್ನು ಪರಿಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಉಗ್ರ ಪ್ರತಿಭಟನೆ ನಡೆಸುತ್ತೇವೆ. ಬೈಂದೂರು ಪ್ರಥಮ ದರ್ಜೆ ಕಾಲೇಜಿನಿಂದ ವಿಶೇಷ ತಹಶೀಲ್ದಾರ ಕಛೇರಿಯ ತನಕ ಪ್ರತಿಭಟನೆ ಮಾಡಿದರು. ಬೇಕೇ ಬೇಕು ಅತಿಥಿ ಉಪನ್ಯಾಸಕರು ಬೇಕು, ನಮ್ಮ ವಿದ್ಯಾಭ್ಯಾಸವನ್ನು ಮುಟ್ಟುಕುಗೊಳಿಸಿದ ಸರ್ಕಾರಕ್ಕೆ ದಿಕ್ಕಾರ ಎಂದು ಘೋಷಣೆ ಕೂಗುತ್ತಾ ನಡೆದರು.
ಕಾಲೇಜಿನ ವಿದ್ಯಾರ್ಥಿಗಳು ಬೈಂದೂರು ವಿಶೇಷ ತಹಶೀಲ್ದಾರ ಕಿರಣ್ ಗೌರಯ್ಯ ಅವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಬೈಂದೂರು ವೃತ್ತ ನಿರೀಕ್ಷ ರಾಘವ ಡಿ. ಪಡೀಲ್ ಹಾಜರಿದ್ದರು.

ವರದಿ : ಎಚ್.ಸುಶಾಂತ್ ಬೈಂದೂರು

Related posts

Leave a Reply