Header Ads
Header Ads
Breaking News

ಬೈಂದೂರು ಮದುವೆ ಮನೆಗೆ ಬೆಂಕಿಯಿಟ್ಟ ಪ್ರಕರಣ ಆರೋಪ ಸಾಭೀತು

ಕುಂದಾಪುರ: ರಸ್ತೆ ಜಾಗದ ತಕಾರರು, ಪೂರ್ವ ದ್ವೇಷದ ಹಿನ್ನೆಲೆ ಸಂಬಂಧಿಗಳ ಮನೆಗೆ ಬೆಂಕಿಯಿಟ್ಟ ಇಬ್ಬರ ಆರೋಪಗಳು ಸಾಭೀತಾಗಿದ್ದು ಅಪರಾಧಿಗಳಿಗೆ ಜುಲೈ ೭ರಂದು ಶಿಕ್ಷೆ ಪ್ರಕಟವಾಗಲಿದೆ.ಇಬ್ಬರ ವಿರುದ್ಧ ಹೊರಿಸಲಾದ ಆರೋಪಗಳು ಸಾಭೀತಾದ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಆರೋಪಿಗಳನ್ನು ದೋಷಿಗಳೆಂದು ಮಹತ್ವದ ತೀರ್ಪು ನೀಡಿದ್ದಾರೆ.ಬೈಂದೂರು ತೆಗ್ಗರ್ಸೆಯ ಅರಳಿಕಟ್ಟೆ ನಿವಾಸಿಗಳಾದ ರಾಜೇಶ್ ಶೆಟ್ಟಿ ಯಾನೆ ರಾಜೇಂದ್ರ (35), ರಾಘವೇಂದ್ರ ಶೆಟ್ಟಿ(33) ಅಪರಾಧಿಗಳು.೨2015, ಎಪ್ರಿಲ್ರಂ22ದು ಬೈಂದೂರು ತೆಗ್ಗರ್ಸೆಯ ಅರಳಿಕಟ್ಟೆಯಲ್ಲಿನ ಕುಶಲ ಶೆಟ್ಟಿಯವರ ಮಗನ ಮದುವೆ ಸಮಾರಂಭವು ಉಪ್ಪುಂದದ ಸಭಾಗೃಹದಲ್ಲಿ ನಡೆಯುತ್ತಿದ್ದ ಹಿನ್ನೆಲೆ ಸ್ಥಳೀಯ ಮಹಿಳೆಯೋರ್ವರನ್ನು ಮನೆಯಲ್ಲಿ ಉಳಿಸಿ ಮನೆಮಂದಿ ಮದುವೆಗೆ ತೆರಳಿದ್ದರು.

ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದ ಸಹೋದರರಾದ ರಾಜೇಶ್ ಶೆಟ್ಟಿ ಹಾಗೂ ರಾಘವೇಂದ್ರ ಮನೆಗೆ ಬೆಂಕಿ ಹಚ್ಚಿ ಹಾನಿಗೊಳಿಸುವ ದುರುದ್ದೇಶದಿಂದ ಕುಶಲ ಶೆಟ್ಟಿ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮಹಿಳೆಯನ್ನು ಬೆದರಿಕೆ ಹಾಕಿ ಮನೆಯ ಬಾಗಿಲು ಒಡೆದು ಒಳನುಗ್ಗಿ ಮನೆಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿ ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.ಇಬ್ಬರು ಸಹೋದರರು ಮಾಡಿದ್ದ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕರಾದ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Related posts

Leave a Reply