Header Ads
Header Ads
Breaking News

ಬೈಕಂಪಾಡಿಯ ಇಂದಿರ ಮಾಧವ ವಿದ್ಯಾರ್ಥಿ ಭವನದಲ್ಲಿ ನಡೆದ ವಿ4ನ್ಯೂಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-2ನ ಗ್ರ್ಯಾಂಡ್ ಫಿನಾಲೆ

ಕರಾವಳಿ ಜನರ ಮನೆಮಾತಾಗಿರುವ ವಿ4ನ್ಯೂಸ್‌ನ ಅತ್ಯಂತ ಜನಪ್ರಿಯ ಕಾರ್ಯಕ್ರಮ ಕಾಮಿಡಿ ಪ್ರೀಮಿಯರ್ ಲೀಗ್. ಜನರಿಗೆ ಮನೋರಂಜೆಯ ಜೊತೆಗೆ ಹಾಸ್ಯದ ರಸದೌತಣವನ್ನು ಉಣಬಡಿಸುತ್ತಿದ್ದ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2 ಇದರ ಗ್ರ್ಯಾಂಡ್ ಫಿನಾಲೆ ಬೈಕಂಪಾಡಿಯ ಇಂದಿರಾ ಮಾಧವ ವಿದ್ಯಾರ್ಥಿ ಭವನದಲ್ಲಿ ಅದ್ಧೂರಿಯಾಗಿ ನೆರವೇರಿತು. ಹಲವು ಗಣ್ಯರ ಉಪಸ್ಥಿತಿ ಈ ಕಾರ್ಯಕ್ರಮಕ್ಕೊಂದು ಮೆರುಗು ನೀಡಿತ್ತು.

 ಕಾಮಿಡಿ ಪ್ರೀಮಿಯರ್ ಲೀಗ್. ಹೆಸರಿಗೆ ತಕ್ಕಂತೆ ಹಾಸ್ಯದ ರಸದೌತಣ ನೀಡುತ್ತಿದ್ದ ರಿಯಾಲಿಟಿ ಶೋ. ವಿ4 ನ್ಯೂಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್‍ಸ್ ಸಹಭಾಗಿತ್ವದಲ್ಲಿ ಸನ್‌ಪ್ರೀಮಿಯಮ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ಸಿಪಿಎಲ್‌ನ ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ನಡೆಯಿತು. ಜೊತೆಗೆ ಕಲರ್ ಫುಲ್ ವಿದ್ಯುತ್ ದೀಪಾಲಂಕಾರ ಇಡೀ ಕಾರ್ಯಕ್ರಮಕ್ಕೆ ಆಕರ್ಷಣೀಯವಾಗಿತ್ತು.

 ಗ್ರ್ಯಾಂಡ್ ಫಿನಾಲೆಯಲ್ಲಿ ಮೊದಲು ಬೈಕಂಪಾಡಿ ಇಂದಿರಾ ಮಾಧವ ವಿದ್ಯಾರ್ಥಿ ಭವನದ ಮಹಿಳಾ ಮಂಡಳಿಯ ಸದಸ್ಯರಿಂದ ಕಾಮಿಡಿ ಪ್ರದರ್ಶನ ನಡೆದಿದ್ದು ನೋಡುಗರನ್ನು ನಗೆಗಡಲಲ್ಲಿ ತೇಲಿಸುವಂತೆ ಮಾಡಿತ್ತು. ಇನ್ನು ಬಳಿಕ ವಿಎನ್‌ಆರ್ ಬಂಟ್ವಾಳ, ಪ್ಲಾನೆಟ್ ಜಿ ವೈಷ್ಣವಿ, ಗೋಹಿಲ್ ಸಾಕ್ಷಿ, ಕಾರ್ ಡೆಕೋರ್ ಹರಿಣಿ, ಮುನೀಶ್ ಕುಡ್ಲ ಕುಸಲ್, ಬಿಯುಮಾಂಡ್ ರಾಜಶ್ರೀ, ವಿನು ತೆಲಿಕೆದ ತೆನಾಲಿ, ಎಸ್ಸೆನ್ ವಿಗ್ರೋ ಫ್ರೆಂಡ್ಸ್ ಜಬರ್ದಸ್ತ್ ಫರ್ಮಾಮೆನ್ಸ್ ನೀಡಿ ಮನೋರಂಜನೆ ನೀಡಿದ್ರು.

ಇನ್ನು ಸಿಪಿಎಲ್ ಸೀಸನ್ 2ನ ಮುಖ್ಯ ತೀರ್ಪುಗಾರರಾದ ಮೈಮ್ ರಾಮ್‌ದಾಸ್ ಮತ್ತು ಶಶಿರಾಜ್ ಕಾವೂರು ಅವರ ಜೊತೆಗೆ ವಿಶೇಷ ತೀರ್ಪುಗಾರರಾಗಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ವಿಸ್ಮಯ್ ವಿನಾಯಕ್, ಭೋಜರಾಜ್ ವಾಮಂಜೂರು, ಸೂರಜ್ ಶೆಟ್ಟಿ, ಅರವಿಂದ್ ಬೋಳಾರ್, ಯತೀಶ್ ಬೈಕಂಪಾಡಿ ಭಾಗವಹಿಸಿದ್ರು.

ದಿನೇಶ್ ಕುಂದರ್, ರೋಸ್ಲಿನ್ ಡಿಲೀಮಾ, ದ,ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ, ಎನ್,ಆರ್. ಬೈಕಂಪಾಡಿ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಎನ್.ಆರ್., ಪುರುಷೋತ್ತಮ್, ಸಂತ ಅಲೋಷಿಯಸ್ ಪಿಯು ಕಾಲೇಜಿನ ಸಿಸ್ಟಂ ಅಡ್ಮಿನ್ ಪ್ರವೀಣ್ ಕುಮಾರ್ ಎನ್, ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಸತ್ಯೇಂದ್ರ ಭಟ್, ಬೈಕಂಪಾಡಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಓಂದಾಸ್ ಸಾಲ್ಯಾನ್, ರಾಜ್ ಕುಂದರ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ಜಯದೇವಪ್ಪ ಕೆ.,

ವಿಶೇಷ ಅತಿಥಿಗಳಾಗಿ ರೂಪೇಶ್ ಶೆಟಿ, ರಾಜ್ ಬಿ ಶೆಟ್ಟಿ, ನವೀನ್ ಶೆಟ್ಟಿ, ಸೂರಜ್ ಇಂಟರ್ ನ್ಯಾಷನಲ್‌ನ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ರು.

ಇನ್ನು ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2 ನ ಗ್ರ್ಯಾಂಡ್ ಫಿನಾಲೆಯಲ್ಲಿ ವಿನರ್‍ಸ್ ಹಾಗೂ ರನ್ನರ್ ಅಪ್‌ಗಳಿಗೆ ಟ್ರೋಫಿ ನೀಡಿ ಅದ್ಧೂರಿಯಾಗಿ ಗೌರವಿಸಲಾಯಿತು. ಹಾಗೂ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 2ನಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಮೊಮೆಂಟೋ ಹಾಗೂ ಪದಕ ನೀಡಿ ಗೌರವಿಸಲಾಯಿತು.

ಸನ್‌ಪ್ರೀಮಿಯಮ್ ರಿಫೈನ್ಡ್ ಸನ್‌ಫ್ಲವರ್ ಆಯಿಲ್ ಮತ್ತು ಅರುಣಾ ಮಸಾಲಾ ಸಹಯೋಗದಲ್ಲಿ ನಡೆದ ಸಿಪಿಎಲ್ ಸೀಸನ್ 2ಗ್ರ್ಯಾಂಡ್ ಫಿನಾಲೆಗೆ ಬೆವರೇಜ್ ಪಾರ್ಟ್‌ನರ್ ಆಗಿ ನಂದಿನಿ, ಯುಎಂ ರೆನಿಗೇಡ್, ಎಂಟರ್‌ಟೈನ್ಮೆಂಟ್ ಪಾರ್ಟ್‌ನರ್ ಆಗಿ ಸುಚಿತ್ರಾ ಪ್ರಭಾತ್ ಚಿತ್ರಮಂದಿರ ಮತ್ತು ಗ್ರೀನ್ ಎನರ್ಜಿ ಪಾರ್ಟ್‌ನರ್ ಆಗಿ ಕುಂಬ್ಳೆ ಸೋಲಾರ್ ಸಂಸ್ಥೆ ಸಹಯೋಗ ನೀಡಿದೆ. ಇದರ ಜೊತೆಗೆ ರಾಯಲ್ ಹೆವನ್ ರೋಸ್, ಒಲಿಂಪಿಕ್ ಸ್ಪೋರ್ಟ್ಸ್, ಕೆಎಂಸಿ ಆಸ್ಪತ್ರೆ, ಗೋಹೀಲ್, ಪ್ಲಾನೆಟ್ ಜಿ, ಆಪಲ್, ಫ್ಲಾಂಟ್ ಹೇರ್ ಫಿಕ್ಸಿಂಗ್, ಕಾರ್ ಡೆಕೋರ್, ಮೋತಿ ಮಹಲ್, ರೆನಾಲ್ಟ್, ಬಿಯುಮೋಂಡ್, ಡಿಜಿಟಲ್ ಪ್ಲಾನೆಟ್, ರೆಡ್‌ಎಫ್‌ಎಂ, ಎಸ್‌ಡಿಎಂ ಕಾಲೇಜು ಉಜಿರೆ ಮತ್ತು ಶಾರದಾ ಆಯುರ್ವೇದ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ಸಿಪಿಎಲ್ 2 ಗ್ರ್ಯಾಂಡ್ ಫಿನಾಲೆ ಸಂಭ್ರಮದಿಂದ ನಡೆಯಿತು.

Related posts

Leave a Reply

Your email address will not be published. Required fields are marked *